
ಗುಜರಾತ್ ನ ಅಹಮದಾಬಾದ್ ಬಾವ್ಲಾದಲ್ಲಿ ಪ್ರಧಾನಿ ಮೋದಿ ಭೇಟಿ ವೇಳೆ ನಿಷೇಧಿತ ವಲಯದಲ್ಲಿ ಡ್ರೋನ್ ಹಾರಾಟ ನಡೆಸಿದ ಮೂವರನ್ನು ಬಂಧಿಸಲಾಗಿದೆ.
ಬಾವ್ಲಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಉಂಟಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಪ್ರಧಾನಿ ಮೋದಿ ಭಾಗಿಯಾಗಿದ್ದ ಕಾರ್ಯಕ್ರಮದ ವೇದಿಕೆ ಸಮೀಪ ಡ್ರೋನ್ ಹಾರಿಸಲಾಗಿತ್ತು.
ಎನ್.ಎಸ್.ಜಿ. ಸಿಬ್ಬಂದಿ ಮೋದಿ ಸಮೀಪಕ್ಕೆ ಬರುತ್ತಿದ್ದ ಡ್ರೋನ್ ಹೊಡೆದುರುರುಳಿಸಿದ್ದರು. ಈ ಪ್ರಕರಣ. ಪ್ರಧಾನಿಯವರ ಭದ್ರತೆಗೆ ನಿಯೋಜನೆಗೊಂಡಿದ್ದ ಎನ್.ಎಸ್.ಜಿ. ಸಿಬ್ಬಂದಿ ಕೂಡಲೇ ಕಾರ್ಯ ಪ್ರವೃತ್ತರಾಗಿ ಡ್ರೋನ್ ಹೊಡೆದುರುಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.