ಬೆಂಗಳೂರು: ಸುಳ್ಳು ಆರೋಪ ಮಾಡಿ ಜೈಲಿಗೆ ಕಳಿಸಿದ್ದ ಮಾಜಿ ಪ್ರೇಯಸಿ ವಿರುದ್ಧ ಯುವಕನೊಬ್ಬ ರಾಜರಾಜೇಶ್ವರಿ ನಗರ ಠಾಣೆ ಪೋಲೀಸರಿಗೆ ದೂರು ನೀಡಿದ್ದಾನೆ.
ಆರ್.ಆರ್. ನಗರ ನಿವಾಸಿ ಶೆರ್ವಿನ್ ನೀಡಿದ ದೂರಿನ ಮೇರೆಗೆ ಕೋಣನಕುಂಟೆ ನಿವಾಸಿ ಸಿಂಧೂರಿ ಮಾನೆ, ಆಕೆಯ ಮಂಜುನಾಥ್, ಸ್ನೇಹಿತ ಸಾಗರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶೆರ್ವಿನ್ ಗೆ ಒಂದೂವರೆ ವರ್ಷದ ಹಿಂದೆ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ಸಿಂಧೂರಿ ಪರಿಚಯವಾಗಿದ್ದು, ಇಬ್ಬರು ಸಲುವೆಯಿಂದ ಇದ್ದರು.
ಕೆಲವು ದಿನಗಳ ಹಿಂದೆ ಸಿಂಧೂರಿ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರಿಂದ ಶೆರ್ವಿನ್ ಅಂತರ ಕಾಯ್ದುಕೊಂಡಿದ್ದಾರೆ. ಆಗ ಇಬ್ಬರ ವಿಚಾರವನ್ನು ಮನೆಯವರಿಗೆ ಹೇಳಿ ಸುಳ್ಳು ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಮಂಜುನಾಥ್, ಸಾಗರ್ ಕೂಡ ಬೆದರಿಸಿ ಬ್ಲಾಕ್ ಮೇಲ್ ಮಾಡಿದ್ದಾರೆ. ಕೇಳಿದಷ್ಟು ಹಣ ಕೊಡದಿದ್ದರೆ ದೂರು ನೀಡುವುದಾಗಿ ಬೆದರಿಸಿದ್ದು, ಖಾಸಗಿ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಇದನ್ನು ಆಧರಿಸಿ ಶೆರ್ವಿನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಜೈಲಿನಿಂದ ಬಿಡುಗಡೆಯಾಗಿ ಬಂದ ಶೆರ್ವಿನ್ ದೂರು ನೀಡಿದ್ದು, 2023ರ ಸೆಪ್ಟೆಂಬರ್ ನಿಂದ ಅಕ್ಟೋಬರ್ 31ರವರೆಗೆ ಆರೋಪಿಗಳು ಎರಡು ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ ಮತ್ತೆ 18 ಲಕ್ಷ ರೂಪಾಯಿ ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.