
ನೈರುತ್ಯ ಫ್ಲೋರಿಡಾದಲ್ಲಿ ಚಂಡಮಾರುತದ ಅಬ್ಬರ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸೈಕ್ಲೋನ್ ನಿಂದಾಗಿ ಕರಾವಳಿ ನಗರ ನೇಪಾಲ್ಸ್ ನಲ್ಲಿ ಭಾರಿ ಹಾನಿಯಾಗಿದೆ.
ಭಾರಿ ಗಾಳಿ, ಮಳೆಯಿಂದಾಗಿ ಕಾರುಗಳು, ರಸ್ತೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಹಲವು ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಚಂಡಮಾರುತದ ಪರಿಣಾಮ ಅಮೆರಿಕದಲ್ಲಿ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ. ಸುಮಾರು 3 ಸಾವಿರ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಇಯಾನ್ ಚಂಡಮಾರುತದಿಂದ ಭಾರಿ ಹಾನಿಯಾಗಿದೆ.