ಲಂಡನ್: ಭಾರತ ಸರ್ಕಾರದ ಕೃಷಿ ಸುಧಾರಣೆಗಳ ಕುರಿತಾಗಿ ರೈತರು ಕೈಗೊಂಡಿರುವ ಹೋರಾಟ ಬೆಂಬಲಿಸಿ ಲಂಡನ್ ನಲ್ಲಿ ಭಾರೀ ಪ್ರತಿಭಟನೆ ನಡೆಸಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಹಲವಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.
ಭಾರತೀಯ ರಾಯಭಾರ ಕಚೇರಿ ಎದುರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಗುಂಪುಗೂಡಿ ರೈತರ ಬೇಡಿಕೆ ಈಡೇರಿಸಬೇಕೆಂದು ಹೋರಾಟ ನಡೆಸಿದ್ದಾರೆ. ಭಾರತೀಯ ರೈತರನ್ನು ಬೆಂಬಲಿಸಿ ಹೋರಾಟ ಕೈಗೊಂಡಿದ್ದೇವೆ. ಭಾರತ ಸರ್ಕಾರ ರೈತರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಲಾಗಿದೆ.
ಜಸ್ಟೀಸ್ ಫಾರ್ ಫಾರ್ಮರ್ಸ್ ಘೋಷಣಾ ಫಲಕ ಸೇರಿದಂತೆ ಹಲವು ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಲಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ಕಾರಣಕ್ಕೆ ಹಲವು ಹೋರಾಟಗಾರರನ್ನು ಬಂಧಿಸಲಾಗಿದೆ.
ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ರಿಟಿಷ್ ಸಿಖ್ಖರು ಭಾಗಿಯಾಗಿದ್ದಾರೆ. ಇವರು ಭಾರತ ವಿರೋಧಿ ಪ್ರತ್ಯೇಕತಾವಾದಿಗಳು. ರೈತರ ಪ್ರತಿಭಟನೆಯನ್ನು ಭಾರತ ವಿರೋಧಿ ಹೋರಾಟಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಭಾರತದಲ್ಲಿ ಕೃಷಿ ಸುಧಾರಣೆ ಮಸೂದೆಗಳ ವಿರುದ್ಧ ರೈತರು ಹೋರಾಟ ನಡೆಸಿರುವುದು ಆಂತರಿಕ ಪ್ರಜಾಪ್ರಭುತ್ವದ ಪ್ರಕ್ರಿಯೆಯ ಭಾಗವಾಗಿದೆ ಎಂದು ಭಾರತ ಹೈಕಮಿಷನ್ ಹೇಳಿದೆ.