
ಕೆಲವರು ಸೂಕ್ಷ್ಮ ಚರ್ಮವನ್ನು ಹೊಂದಿರುತ್ತಾರೆ. ಅವರು ತಮ್ಮ ಚರ್ಮವನ್ನು ತುಂಬಾ ಎಚ್ಚರದಿಂದ ನೋಡಿಕೊಳ್ಳಬೇಕು. ಇಲ್ಲವಾದರೆ ಇದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಹಾಗಾಗಿ ಸೂಕ್ಷ್ಮ ಚರ್ಮ ಹೊಂದಿರುವವರು ಈ ರೀತಿಯಲ್ಲಿ ಚರ್ಮದ ಆರೈಕೆ ಮಾಡಿ.
* ಕ್ಲೆನ್ಸರ್ ಗಳನ್ನು ಪ್ರತಿದಿನ ಬಳಸಿ. ಇದು ಚರ್ಮವನ್ನು ಸೌಮ್ಯಗೊಳಿಸಿ ಕಲ್ಮಶಗಳನ್ನು ಸುಲಭವಾಗಿ ಸಂಪೂರ್ಣವಾಗಿ ತೆಗೆದುಹಾಕುತ್ತದೆ.
*ಪ್ರತಿದಿನ ಮುಖವನ್ನು ತೊಳೆದು ಸಿರಮ್ ನ್ನು ಹಚ್ಚಿ. ಅದರಲ್ಲೂ ವಿಟಮಿನ್ ಸಿ ಸಿರಮ್ ನ್ನು ಬಳಸಿ. ಇದು ಬ್ಯಾಕ್ಟೀರಿಯಾಗಳಿಂದ ಚರ್ಮವನ್ನು ಕಾಪಾಡುತ್ತದೆ.ಇದನ್ನು ಹಗಲಿನಲ್ಲಿ ಬಳಸಿ.
*ಚರ್ಮವನ್ನು ಹೈಡ್ರೀಕರಿಸುವಂತಹ ಫೇಸ್ ಪ್ಯಾಕ್ ನ್ನು ಬಳಸಿ. ಇದು ಮುಖದ ಚರ್ಮವನ್ನು ಬಿರುಕು ಮತ್ತು ಒಣಚರ್ಮ ಸಮಸ್ಯೆಯಿಂದ ಕಾಪಾಡುತ್ತದೆ. ಚರ್ಮದಲ್ಲಿರುವ ಧೂಳು, ಕೊಳೆ ನಿವಾರಣೆಯಾಗುತ್ತದೆ.