ಸಾಮಾನ್ಯವಾಗಿ ಎಣ್ಣೆಯುಕ್ತ ಮತ್ತು ಒಣ ಚರ್ಮದ ಮೇಲೆ ವಿಭಿನ್ನ ಉತ್ಪನ್ನಗಳನ್ನು ಬಳಸಲಾಗುತ್ತದೆ. ಆದರೆ ಕೆಲವರು ಒಂದೇ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಇದರಿಂದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಒಣ ಚರ್ಮದವರು ಮೇಕಪ್ ಹಚ್ಚುವಾಗ ಈ ತಪ್ಪುಗಳನ್ನು ಮಾಡಬೇಡಿ.
* ಮುಖಕ್ಕೆ ಪೌಂಡೇಶನ್ ಹಚ್ಚುವಾಗ ಎರಡು ವಿಧಾನಗಳಿವೆ. ಒಂದು ಬ್ರಶ್ ಬಳಸಿ, ಮತ್ತೊಂದು ಸ್ಪಂಜ್ ಬಳಸಿ. ಹಾಗಾಗಿ ಒಣ ಚರ್ಮದವರು ಪೌಂಡೇಶನ್ ಹಚ್ಚುವಾಗ ಬ್ರಶ್ ಬದಲು ಸ್ಪಂಜ್ ಅನ್ನು ಬಳಸಿ. ಸ್ಪಂಜ್ ಅನ್ನು ತೇವಗೊಳಿಸಿ ಬಳಸುವುದರಿಂದ ಮೇಕಪ್ ಚೆನ್ನಾಗಿ ಹಿಡಿಯುತ್ತದೆ ಮತ್ತು ಮೃದುವಾಗಿ ಕಾಣಿಸುತ್ತದೆ.
* ಒಣ ಚರ್ಮದವರು ಮೇಕಪ್ ಮಾಡುವಾಗ ಇಡೀ ಮುಖಕ್ಕೆ ಪೌಡರ್ ಹಚ್ಚಬಾರದು. ಯಾಕೆಂದರೆ ಅವರ ಮುಖದ ಕೆಲವು ಭಾಗ ಎಣ್ಣೆಯುಕ್ತವಾಗಿರುತ್ತದೆ. ಹಾಗಾಗಿ ಪೌಡರ್ ಅನ್ನು ಸಮತೋಲನಗೊಳಿಸಬೇಕು. ಇಲ್ಲವಾದರೆ ಒಂದು ಕಡೆ ಪೌಡರ್ ಹೆಚ್ಚಾಗಿ ಕಾಣಿಸುತ್ತದೆ.
* ಒಣ ಚರ್ಮದವರು ಹೆಚ್ಚಾಗಿ ಪುಡಿ ಆಧರಿತ ಮೇಕಪ್ ಉತ್ಪನ್ನಗಳಿಂದ ದೂರವಿರಿ. ಕೆನೆ ಆಧಾರಿತ ಮೇಕಪ್ ಉತ್ಪನ್ನಗಳನ್ನು ಬಳಸಿ. ಇದರಿಂದ ಮುಖ ಅಂದವಾಗಿ ಕಾಣುತ್ತದೆ.