ಕೆಲವರು ಶಿವಲಿಂಗವನ್ನು ಮನೆಯಲ್ಲಿಟ್ಟು ಪೂಜೆ ಮಾಡುತ್ತಾರೆ. ಆದರೆ ಶಿವಲಿಂಗವನ್ನು ಮನೆಯಲ್ಲಿಟ್ಟು ಪೂಜಿಸುವಾಗ ಕೆಲವೊಂದು ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಇಲ್ಲವಾದರೆ ಇದರಿಂದ ಶಿವನ ಕೋಪಕ್ಕೆ ಗುರಿಯಾಗಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ನಿಯಮಗಳ ಬಗ್ಗೆ ತಿಳಿದುಕೊಳ್ಳಿ.
ಶಿವಲಿಂಗವನ್ನು ಪೂಜಾ ಗೃಹಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳಗಳಲ್ಲಿ ಇಡಬಾರದು. ಇದರಿಂದ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ.
ಶಿವಲಿಂಗದ ಜೊತೆ ಗಣೇಶನ ವಿಗ್ರಹವನ್ನು ಇಡಿ ಇದರಿಂದ ಶುಭವಾಗುತ್ತದೆ.
ಶಿವಲಿಂಗವನ್ನು ಮಲಗುವ ಕೋಣೆಯಲ್ಲಿ ಸ್ಥಾಪಿಸಬೇಡಿ. ಇದರಿಂದ ಶಿವಲಿಂಗಕ್ಕೆ ಅವಮಾನ ಮಾಡಿದಂತಾಗುತ್ತದೆ. ಹಾಗಾಗಿ ಪೂಜಾ ಗೃಹದಲ್ಲಿರಿಸಿ.
ಶಿವಲಿಂಗವಿಟ್ಟ ಪೂಜಾಗೃಹದ ಅಕ್ಕ ಪಕ್ಕದಲ್ಲಿ ಸ್ನಾನದ ಗೃಹ ಇರಬಾರದು. ಅಲ್ಲದೇ ಮಹಡಿ ಮನೆಯಲ್ಲಿ ಶಿವಲಿಂಗವಿಟ್ಟಾಗ ಅದರ ಮೇಲುಗಡೆ ಬಾತ್ ರೂಂ ಬರಬಾರದು. ಇದರಿಂದ ದೋಷ ಸುತ್ತಿಕೊಳ್ಳುತ್ತದೆ.
ಶಿವಲಿಂಗಕ್ಕೆ ಅಪ್ಪಿತಪ್ಪಿಯೂ ಅರಶಿನವನ್ನು ಹಚ್ಚಬೇಡಿ.