ತೆಂಗಿನೆಣ್ಣೆಯನ್ನು ಹೆಚ್ಚಾಗಿ ಅಡುಗೆಗೆ ಬಳಸುತ್ತಾರೆ. ಇದು ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಅದನ್ನು ನಿಯಮಿತವಾಗಿ ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮದ ಜೊತೆಯಲ್ಲಿ ಬಳಸಿದರೆ ದೇಹದ ತೂಕವನ್ನು ಇಳಿಸಿಕೊಳ್ಳಬಹುದು. ಹಾಗಾಗಿ ತೂಕ ಇಳಿಸಲು ತೆಂಗಿನೆಣ್ಣೆಯನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳಿ.
*ಬಿಸಿ ನೀರು ಅಥವಾ ಗಿಡಮೂಲಿಕೆ ಚಹಾಕ್ಕೆ 1 ಚಮಚ ತೆಂಗಿನೆಣ್ಣೆಯನ್ನು ಸೇರಿಸಿ ಬೆಳಿಗ್ಗೆ ಸೇವಿಸಿ. ಇದನ್ನು ಪ್ರತಿದಿನ ಮಾಡುತ್ತಾ ಬಂದರೆ ತೂಕ ಇಳಿಕೆಯಾಗುತ್ತದೆ.
*ಇತರ ಎಣ್ಣೆಗಳನ್ನು ಬಳಸಿ ಸಿಹಿತಿಂಡಿಗಳನ್ನು, ನಿಮ್ಮ ನೆಚ್ಚಿನ ಅಡುಗೆಗಳನ್ನು ತಯಾರಿಸುವ ಬದಲು ತೆಂಗಿನೆಣ್ಣೆಯನ್ನು ಬಳಸಿ. ಇದರಿಂದ ಕೆಟ್ಟ ಕೊಬ್ಬು ಹೆಚ್ಚಾಗುವುದನ್ನು ತಡೆಯಬಹುದು.
*ಊಟಕ್ಕೆ ಮೊದಲು ತೆಂಗಿನೆಣ್ಣೆಯನ್ನು ಸೇವಿಸುವುದರಿಂದ ನಿಮ್ಮ ಹಸಿವನ್ನು ನೀಗಿಸಿಕೊಳ್ಳಬಹುದು. ಇದರಿಂದ ಆಹಾರ ಸೇವನೆ ಕಡಿಮೆಯಾಗಿ ತೂಕ ಇಳಿಕೆಯಾಗುತ್ತದೆ.