
ಬೊಜ್ಜು ಈಗ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಬೇಕೆಂಬ ಮಾತು ಪ್ರತಿಯೊಬ್ಬರಿಂದಲೂ ಕೇಳಿ ಬರ್ತಿದೆ. ಅನೇಕರು ತೂಕ ಇಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದ್ರೆ ಅನೇಕರು ಇದ್ರಲ್ಲಿ ಯಶಸ್ಸು ಕಾಣುವುದಿಲ್ಲ. ಬೇಗ ತೂಕ ಇಳಿಸಿಕೊಳ್ಳಬೇಕೆನ್ನುವವರಿಗೆ ಈ ಪಾನೀಯಗಳು ಬೆಸ್ಟ್.
ಓಂ ಕಾಳಿನ ನೀರನ್ನು ಕುಡಿಯುವುದ್ರಿಂದ ಬೊಜ್ಜು ಬೇಗ ಕಡಿಮೆಯಾಗುತ್ತದೆ. ಈ ನೀರನ್ನು ಆಹಾರ ಸೇವನೆ ಮಾಡಿದ ನಂತ್ರ ನಿಯಮಿತವಾಗಿ ಕುಡಿಯಬೇಕು. ವಾರದಲ್ಲಿ ನೀವೇ ಫಲಿತಾಂಶ ಕಾಣಬಲ್ಲಿರಿ.
ದಾಲ್ಚಿನ್ನಿ ನೀರು ತೂಕ ಕಡಿಮೆ ಮಾಡಲು ಸಹಕಾರಿ. ಇದಕ್ಕಾಗಿ ದಾಲ್ಚಿನ್ನಿ ಪುಡಿಯನ್ನು ನೀರಿನಲ್ಲಿ ಕುದಿಸಿ ಕುಡಿಯಬೇಕು. ಮಧುಮೇಹ ರೋಗಿಗಳಿಗೂ ಇದು ಒಳ್ಳೆಯದು.
ಜೀರಿಗೆ ನೀರು ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಆದರೆ ಮೀತಿ ಮೀರಿ ಇದ್ರ ಸೇವನೆ ಮಾಡಬಾರದು.
ಕೊತ್ತಂಬರಿ ಬೀಜದ ನೀರನ್ನು ಕುಡಿಯುವುದರಿಂದ ತೂಕವನ್ನು ಕಡಿಮೆ ಮಾಡಬಹುದು. ವಿಶೇಷವಾಗಿ ಮುಟ್ಟಿನಲ್ಲಿ ತೊಂದರೆ ಇರುವ ಮಹಿಳೆಯರಿಗೆ ಈ ನೀರು ಒಳ್ಳೆಯದು.