ದೇಹದಲ್ಲಿ ಸಂಗ್ರಹವಾದ ಕೊಬ್ಬು ಹಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಒಂದು ಕಡೆ ಆರೋಗ್ಯ ಸಮಸ್ಯೆ ಉಂಟುಮಾಡಿದರೆ ಇನ್ನೊಂದು ಕಡೆ ಫಿಟ್ ನೆಸ್ ನ್ನು ಹಾಳುಮಾಡುತ್ತದೆ.
ಹಾಗಾಗಿ ಜನರು ತೂಕ ಇಳಿಸಿಕೊಳ್ಳಲು ವ್ಯಾಯಾಮ, ಯೋಗ, ಡಯೆಟ್ ಗಳನ್ನು ಮಾಡುತ್ತಾರೆ. ಆದರೆ ಹೊಟ್ಟೆಯ ಕೊಬ್ಬು ಕಡಿಮೆ ಮಾಡಲು ಬಯಸುವವರು ಈ ತಪ್ಪುಗಳನ್ನು ಮಾಡಬೇಡಿ.
* ನಿಮ್ಮ ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣ ನೀವು ಅರಿವಿಲ್ಲದೇ ಆಹಾರ ಸೇವಿಸುವುದೇ ಆಗಿದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಹಸಿರು ತರಕಾರಿ, ಪ್ರೋಟಿನ್ ನ್ನು ಸೇರಿಸಿಕೊಳ್ಳಿ. ಮೀನು, ಬೀಜಗಳು, ಆವಕಾಡೊ ಮುಂತಾದವುಗಳನ್ನು ಸೇವಿಸಿದರೆ ಉತ್ತಮ. ಕೆಂಪು ಮಾಂಸ ಮತ್ತು ಅತಿಯಾದ ಹುರಿದ ಆಹಾರದಿಂದ ದೂರವಿರಿ.
* ನಿಮ್ಮ ಹೊಟ್ಟೆಯ ಕೊಬ್ಬು ಕಡಿಮೆಯಾಗದಿರಲು ಕಾರಣ ಧೂಮಪಾನ. ಇದು ಹೊಟ್ಟೆ ಮತ್ತು ಕರುಳಿನ ಕೊಬ್ಬನ್ನು ಹೆಚ್ಚಿಸುತ್ತದೆ. ಹಾಗಾಗಿ ಧೂಮಪಾನದಿಂದ ದೂರವಿರಿ.
* ಅತಿಯಾಗಿ ಬಿಯರ್ ಸೇವಿಸಿದರೆ ಹೊಟ್ಟೆಯ ಕೊಬ್ಬು ಹೆಚ್ಚಾಗುತ್ತದೆ. ಹಾಗಾಗಿ ಕೊಬ್ಬು ಇಳಿಸಲು ಬಯಸುವವರು ಬಿಯರ್ ಸೇವಿಸಬೇಡಿ.
*ಒತ್ತಡ ಕೂಡ ಹೊಟ್ಟೆಯ ಕೊಬ್ಬು ಹೆಚ್ಚಿಸಲು ಸಹಕಾರಿಯಾಗಿದೆ. ಹಾಗಾಗಿ ಒತ್ತಡ ಕಡಿಮೆ ಮಾಡಲು ವ್ಯಾಯಾಮಗಳನ್ನು ಮಾಡಿ.