ಸ್ತನದ ಗಾತ್ರ ಹೆಚ್ಚಿಸಲು ಕೆಲವರು ಸರ್ಜರಿಗಳನ್ನು ಮಾಡುತ್ತಾರೆ. ಕೆಲವರು ತೈಲಗಳು, ಕ್ರೀಂಗಳನ್ನು ಬಳಸುತ್ತಾರೆ. ಆದರೆ ಇದರಿಂದ ಅಡ್ಡಪರಿಣಾಮಗಳು ಉಂಟಾಗುಬಹುದು. ಹಾಗಾಗಿ ಯೋಗಗಳ ಮೂಲಕ ಸ್ತನದ ಗಾತ್ರವನ್ನು ಹೆಚ್ಚಿಸಬಹುದು. ಕೆಲವು ಭಂಗಿಗಳು ನಿಮ್ಮ ಸ್ತನದ ಗಾತ್ರವನ್ನು ಹೆಚ್ಚಿಸುತ್ತವೆ. ಇದರಿಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಹಾಗಾದ್ರೆ ಆ ಯೋಗ ಭಂಗಿಗಳ ಬಗ್ಗೆ ತಿಳಿದುಕೊಳ್ಳಿ.
* ವೃಕ್ಷಾಸನ (ಮರದ ಭಂಗಿ) : ನೆಟ್ಟಗೆ ನಿಂತುಕೊಳ್ಳಿ. ಕಾಲುಗಳ ನಡುವೆ ಒಂದು ಅಡಿ ಅಂತರವಿರಲಿ. ನಿಮ್ಮ ಎಡಗಾಲಿನ ಮೇಲೆ ದೇಹವನ್ನು ಸಮತೋಲನಗೊಳಿಸಿ ನಿಮ್ಮ ಬಲಗಾಲನ್ನು ಮೇಲಕ್ಕೆತ್ತಿ ನಿಮ್ಮ ಎಡ ತೊಡೆಯ ಒಳಭಾಗದಲ್ಲಿ ಇರಿಸಿ. ನಿಮ್ಮ ಎದೆಯ ಮಟ್ಟದಲ್ಲಿ ಪ್ರಾರ್ಥನೆ ಮಾಡುವಂತೆ ಅಂಗೈಗಳನ್ನು ಜೋಡಿಸಿ.
ಇದು ಸ್ತನದ ಬದಿಯಲ್ಲಿರುವ ಅಂಗಾಂಶಗಳನ್ನು ಅವುಗಳ ಗಾತ್ರವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದು ಸ್ತನದ ಸ್ನಾಯುಗಳ ಬೆಳವಣಿಗೆಗೆ ಸಹಕರಿಸುತ್ತದೆ.
* ಉಸ್ಟ್ರಾಸಾನ (ಒಂಟೆ ಭಂಗಿ): ನೀವು ನೆಲದ ಮೇಲೆ ಮಂಡಿಯೂರಿ ಬಳಿಕ ನಿಮ್ಮ ಬೆನ್ನನ್ನು ಹಿಂದಕ್ಕೆ ಭಾಗಿಸಿ ನಿಮ್ಮ ಕೈಗಳಿಂದ ನಿಮ್ಮ ಕಾಲುಗಳನ್ನು ಹಿಡಿದುಕೊಳ್ಳಿ. 30 ಸೆಕೆಂಡುಗಳ ಕಾಲ ಹೀಗೆ ಮಾಡಿ.
ಇದು ಸ್ತನದ ಸುತ್ತಲಿನ ಸ್ನಾಯು ಅಂಗಾಂಶಗಳನ್ನು ವಿಸ್ತರಿಸುತ್ತದೆ. ನಿಮ್ಮ ಸ್ತನದ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಸ್ತನದ ಕೆಳಭಾಗದ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗಿದೆ.