ಪುರುಷರು ದೇಹವನ್ನು ಸಿಕ್ಸ್ ಪ್ಯಾಕ್ ರೀತಿ ಮಾಡಿಕೊಳ್ಳಲು ಬಯಸುತ್ತಾರೆ. ಅದಕ್ಕಾಗಿ ಜಿಮ್ ನಲ್ಲಿ ಅತಿಯಾದ ವರ್ಕ್ ಔಟ್ ಗಳನ್ನು ಮಾಡುತ್ತಾರೆ. ಅದರ ಬದಲು ಈ ಶಕ್ತಿಯುತವಾದ ಯೋಗಾಸನಗಳನ್ನು ಮಾಡಿ. ಇದು ನಿಮ್ಮ ಎದೆ, ಭುಜಗಳು, ತೋಳುಗಳು, ಕಾಲುಗಳು, ಕೆಳ ಬೆನ್ನು ಇತ್ಯಾದಿ ಸ್ನಾಯುಗಳನ್ನು ಬಲಪಡಿಸುತ್ತದೆ.
*ಹಲಾಸನ (ನೇಗಿಲು ಭಂಗಿ) : ಈ ಭಂಗಿಯು ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳು, ಭುಜಗಳು, ಬೆನ್ನು ಮತ್ತು ಕಾಲುಗಳನ್ನು ಬಲಪಡಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಹಸಿವನ್ನು ಸುಧಾರಿಸುತ್ತದೆ. ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
*ನೌಕಾಸನ(ದೋಣಿ ಭಂಗಿ): ಈ ಯೋಗ ಭಂಗಿಯು ಬೆನ್ನು ಮತ್ತು ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುಲು ಸಹಾಯ ಮಾಡುತ್ತದೆ. ಕಾಲಿನ ಮತ್ತು ತೋಳಿಸ ಸ್ನಾಯುಗಳನ್ನು ಬಲಪಡಿಸುತ್ತದೆ.
*ಪ್ಲ್ಯಾಂಕ್ ಭಂಗಿ(ಹಲಗೆ ಭಂಗಿ): ನಿಮ್ಮ ದೇಹದಲ್ಲಿರುವ ಎಲ್ಲಾ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ಕೇವಲ ಶಕ್ತಿ ಮತ್ತು ಸ್ಥಿರತೆಯನ್ನು ಸುಧಾರಿಸುವುದಲ್ಲದೇ ನಿಮ್ಮ ಇಡೀ ದೇಹದ ಕೆಲಸವನ್ನು ಸುಧಾರಿಸುತ್ತದೆ. ಹಾಗಾಗಿ ಸಿಕ್ಸ್ ಪ್ಯಾಕ್ ದೇಹ ಪಡೆಯಲು ಬಯಸುವವರು ಈ ಭಂಗಿಯನ್ನು ಮಾಡಬಹುದು.