ಪ್ರತಿಯೊಬ್ಬರಿಗೂ ತಮ್ಮ ಆರೋಗ್ಯದ ಜೊತೆ ಸೌಂದರ್ಯದ ಬಗ್ಗೆಯೂ ಚಿಂತೆ ಇರುತ್ತದೆ. ಮುಖದ ಮೇಲೆ ಮೊಡವೆಯಾದ್ರೆ, ಯಾವುದೇ ಕಲೆಯಾದ್ರೆ ಇಲ್ಲ ಮೊದಲಿಗಿಂತ ಮುಖದ ಕಾಂತಿ ಕಡಿಮೆಯಾದ್ರೆ ಎಂದು ಎಲ್ಲರೂ ಯೋಚನೆ ಮಾಡ್ತಾರೆ.
ಆಯ್ಕೆ ಮಾಡಿ ಆಹಾರ ಸೇವನೆ ಮಾಡುವ ಮಂದಿ ಬೆರಳೆಣಿಕೆಯಷ್ಟು. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ತಿಳಿದಿದ್ದೂ ಅನೇಕರು ಅದೇ ಆಹಾರವನ್ನು ಬಾಯಿ ರುಚಿಗಾಗಿ ಸೇವನೆ ಮಾಡ್ತಾರೆ. ಆ ಕೆಲ ಆಹಾರಗಳು ಆರೋಗ್ಯದ ಜೊತೆಗೆ ನಮ್ಮ ಚರ್ಮದ ಮೇಲೂ ದುಷ್ಪರಿಣಾಮ ಬೀರುತ್ತದೆ.
ಚರ್ಮ ಹಾಳಾಗುವ ಜೊತೆಗೆ ಚರ್ಮದ ಹೊಳಪು ಕಡಿಮೆಯಾಗುತ್ತದೆ. ಚರ್ಮ ಕಾಂತಿ ಕಳೆದುಕೊಂಡು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ.
ಆರೋಗ್ಯದ ಜೊತೆಗೆ ಚರ್ಮದ ಬಗ್ಗೆ ಹೆಚ್ಚು ಗಮನ ನೀಡುವವರು ಮಸಾಲೆಯುಕ್ತ ಆಹಾರದಿಂದ ದೂರ ಇರುವುದು ಒಳ್ಳೆಯದು. ಇದು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ರಕ್ತನಾಳಗಳನ್ನು ಹಿಗ್ಗಿಸುತ್ತದೆ.
ಕಾಫಿಯಲ್ಲಿರುವ ಕೆಫೀನ್ ಒತ್ತಡದ ಹಾರ್ಮೋನನ್ನು ಹೆಚ್ಚಿಸುತ್ತದೆ. ಇದ್ರಿಂದ ಚರ್ಮ ಹಾಳಾಗುತ್ತದೆ. ಮುಖ ಕಪ್ಪಾಗಲು ಶುರುವಾಗುತ್ತದೆ.
ಬಿಳಿಯ ಬ್ರೆಡ್ ನಿಂದ ಇನ್ಸುಲಿನ್ ಅಂಶ ಹೆಚ್ಚಾಗುತ್ತದೆ. ಚರ್ಮದಲ್ಲಿರುವ ತೈಲ ಪ್ರಮಾಣ ಹೆಚ್ಚಾಗುತ್ತದೆ. ಜೊತೆಗೆ ಚರ್ಮದ ಹೊಳಪು ಕಡಿಮೆಯಾಗುತ್ತದೆ.
ಕರಿದ ಪದಾರ್ಥಗಳು ಹಾಗೆ ತಂಪು ಪಾನೀಯಗಳು ಕೂಡ ಆರೋಗ್ಯದ ಜೊತೆಗೆ ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತದೆ.