ಈಗ ಮದುವೆಯ ಸೀಸನ್ ನಡೆಯುತ್ತಿದೆ. ಆದರೆ ಚಿನ್ನ ಮಾತ್ರ ಬಹಳ ದುಬಾರಿಯಾಗಿದೆ. ಬಂಗಾರದ ಬೆಲೆ 10 ಗ್ರಾಂಗೆ 63,000 ರೂಪಾಯಿಗೆ ತಲುಪಿದೆ. ಬಯಸಿದರೂ ಜನರು ಅದನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಬೇಸರ ಮಾಡಿಕೊಳ್ಳಬೇಕಿಲ್ಲ, ಮುಂದಿನ ವಾರದಿಂದ ಅಗ್ಗದ ಚಿನ್ನವನ್ನು ಖರೀದಿಸುವ ಅವಕಾಶ ಎಲ್ಲರಿಗೂ ಲಭ್ಯವಾಗಲಿದೆ.
ಫೆಬ್ರವರಿ 12ರಿಂದ ಮೋದಿ ಸರ್ಕಾರದ ಗೋಲ್ಡ್ ಸ್ಕೀಮ್ ಅಡಿಯಲ್ಲಿ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಸಾವರಿನ್ ಗೋಲ್ಡ್ ಬಾಂಡ್ 2023-24ರ ನಾಲ್ಕನೇ ಸಿರೀಸ್ ಇದು.
ಸಾವರಿನ್ ಗೋಲ್ಡ್ ಬಾಂಡ್ ಎಂದರೇನು ?
ಸಾವರಿನ್ ಗೋಲ್ಡ್ ಬಾಂಡ್ ಸರ್ಕಾರದ ಚಿನ್ನದ ಬಾಂಡ್ ಯೋಜನೆ. ಇದು ನಿಮಗೆ ಚಿನ್ನದ ಮೇಲೆ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ. ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಖರೀದಿಸಿ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಈ ಚಿನ್ನದ ಬಾಂಡ್ ಮೂಲಕ ನೀವು 99.9 ಪ್ರತಿಶತ ಶುದ್ಧ ಚಿನ್ನವನ್ನು ಖರೀದಿಸುವ ಅವಕಾಶವನ್ನು ಪಡೆಯುತ್ತೀರಿ. ಆರ್‌ಬಿಐ ಈ ಚಿನ್ನದ ಬಾಂಡ್ ಅನ್ನು ಬಿಡುಗಡೆ ಮಾಡುತ್ತದೆ. SGB ಅನ್ನು ಡಿಮ್ಯಾಟ್ ಆಗಿ ಪರಿವರ್ತಿಸಬಹುದು.
ಈ ಚಿನ್ನದ ಬಾಂಡ್ ಮೂಲಕ ನೀವು 24 ಕ್ಯಾರೆಟ್‌ನ ಶೇ.99.9ರಷ್ಟು ಶುದ್ಧ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಇಷ್ಟೇ ಅಲ್ಲ ಬಾಂಡ್ ಖರೀದಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಮತ್ತು ಹಣ ಪಾವತಿಸಿದರೆ ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆಗೆ ರಿಯಾಯಿತಿ ಸಹ ಸಿಗುತ್ತದೆ.
ನೀವು ಯಾವಾಗ SGB ಯಲ್ಲಿ ಹೂಡಿಕೆ ಮಾಡಬಹುದು ?
ಫೆಬ್ರವರಿ 12ರಿಂದ ಫೆಬ್ರವರಿ 16ರವರೆಗೆ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆ ಮಾಡಬಹುದು. ಹೂಡಿಕೆ ಮಾಡಲು ಐದು ದಿನಗಳ ಅವಕಾಶವಿದೆ. ಬಾಂಡ್‌ಗಳನ್ನು ಫೆಬ್ರವರಿ 21 ರಿಂದ ನೀಡಲಾಗುವುದು.
ಚಿನ್ನದ ಬಾಂಡ್‌ಗಳನ್ನು ಖರೀದಿಸಬಹುದೆಲ್ಲಿ ?
-RBI ನೀಡಿದ SGB ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಗೊತ್ತುಪಡಿಸಿದ ವಾಣಿಜ್ಯ ಬ್ಯಾಂಕುಗಳಿಂದ ಖರೀದಿಸಬಹುದು.
-ಇದರ ಹೊರತಾಗಿ ಪೋಸ್ಟ್ ಆಫೀಸ್ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಶನ್‌ನಿಂದ ಖರೀದಿಸಬಹುದು.
-BSE, NSE ಪ್ಲಾಟ್‌ಫಾರ್ಮ್‌ಗಳಿಂದಲೂ ಖರೀದಿಸಲು ಅವಕಾಶವಿದೆ.
ಸಾವರಿನ್ ಗೋಲ್ಡ್ ಬಾಂಡ್‌ನ ಪ್ರಯೋಜನಗಳೇನು ?
ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆಯ ಮೇಲೆ ವಾರ್ಷಿಕವಾಗಿ ಶೇ.2.4ರಷ್ಟು ಬಡ್ಡಿ ಸಿಗುತ್ತದೆ. ಚಿನ್ನದ ಬೆಲೆ ಹೆಚ್ಚಾದಂತೆ, ಚಿನ್ನದ ಬಾಂಡ್‌ಗಳಲ್ಲಿನ ಹೂಡಿಕೆಯ ಮೌಲ್ಯ ಸಹ ಹೆಚ್ಚಾಗುತ್ತದೆ. ಈ ಚಿನ್ನದ ಬಾಂಡ್‌ನ ನಿಯಂತ್ರಣವು ಆರ್‌ಬಿಐ ಕೈಯಲ್ಲಿರುವುದರಿಂದ ಹೂಡಿಕೆಯ ಭದ್ರತೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಭೌತಿಕ ಚಿನ್ನದ ಮೇಲೆ ಮೂರು ಪ್ರತಿಶತ GST ಪಾವತಿಸಬೇಕು. ಆದರೆ ಚಿನ್ನದ ಬಾಂಡ್‌ಗಳ ಮೇಲೆ ಯಾವುದೇ GST ಇರುವುದಿಲ್ಲ. ಈ ಬಾಂಡ್ ಮೂಲಕ ಸಾಲ ಪಡೆಯಬಹುದು. ಚಿನ್ನದ ಶುದ್ಧತೆಯ ಬಗ್ಗೆ ಅಥವಾ ಅದನ್ನು ಲಾಕರ್‌ನಲ್ಲಿ ಇಡುವುದರ ಬಗ್ಗೆ ಚಿಂತಿಸಬೇಕಾಗಿಲ್ಲ. ಇಷ್ಟೇ ಅಲ್ಲ ಮೆಚ್ಯೂರಿಟಿಯ ನಂತರ ಚಿನ್ನದ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಆನ್‌ಲೈನ್‌ನಲ್ಲಿ ಖರೀದಿಸುವಾಗ ಪ್ರತಿ ಗ್ರಾಂಗೆ 50 ರೂಪಾಯಿಗಳ ರಿಯಾಯಿತಿ ಸಿಗುತ್ತದೆ.
ಈ ಚಿನ್ನದ ಬಾಂಡ್ ಅನ್ನು ಯಾರು ಖರೀದಿಸಬಹುದು ?
ಯಾವುದೇ ಭಾರತೀಯ ನಾಗರಿಕರು ಮತ್ತು ಭಾರತೀಯ ಮೂಲದ ವ್ಯಕ್ತಿ ಇದರಲ್ಲಿ ಹೂಡಿಕೆ ಮಾಡಬಹುದು. ಇದಲ್ಲದೆ ಟ್ರಸ್ಟ್, ಯುಜಿಸಿಯಿಂದ ಗುರುತಿಸಲ್ಪಟ್ಟ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ದತ್ತಿ ಸಂಸ್ಥೆಗಳು ಇದರಲ್ಲಿ ಹೂಡಿಕೆ ಮಾಡಬಹುದು. ವೈಯಕ್ತಿಕವಾಗಿ, ನೀವು 1 ಗ್ರಾಂನಿಂದ 4 ಕಿಲೋಗ್ರಾಂಗಳಷ್ಟು ಚಿನ್ನದ ಮೇಲೆ ಹೂಡಿಕೆ ಮಾಡಬಹುದು.
ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಹೇಗೆ ?
ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್ ಮೂಲಕ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಮೊದಲು ನೆಟ್ ಬ್ಯಾಂಕಿಂಗ್ ಮೂಲಕ ಖಾತೆಗೆ ಲಾಗ್ ಇನ್ ಮಾಡಿ. ಮೇನ್ ಮೆನುಗೆ ಹೋಗಿ ‘ಇ-ಸೇವೆಗಳು’ ಆಯ್ಕೆಮಾಡಿ ಮತ್ತು ‘ಸಾರ್ವಭೌಮ ಚಿನ್ನದ ಬಾಂಡ್’ ಮೇಲೆ ಕ್ಲಿಕ್ ಮಾಡಿ. ಹೊಸ ಬಳಕೆದಾರರು ಮೊದಲು ನೋಂದಾಯಿಸಿಕೊಳ್ಳಬೇಕು.
ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಆನ್‌ಲೈನ್ ನೋಂದಣಿ ಫಾರ್ಮ್ ಅನ್ನು ಸಲ್ಲಿಸಿ. -ನೋಂದಣಿ ನಂತರ, ಹೆಡರ್ ಲಿಂಕ್/ವಿಭಾಗದಿಂದ ಖರೀದಿ ಆಯ್ಕೆಯನ್ನು ಆರಿಸಿ ಮತ್ತು ‘ಖರೀದಿ’ ಕ್ಲಿಕ್ ಮಾಡಿ. ಚಂದಾದಾರಿಕೆ ಪ್ರಮಾಣ ಮತ್ತು ನಾಮಿನಿ ವಿವರಗಳನ್ನು ನಮೂದಿಸಿ. ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಯೊಂದಿಗೆ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.