ಮಲಗುವ ಕೋಣೆ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಪ್ರಮುಖ ಭಾಗವಾಗಿದೆ. ದಿನದ ಪ್ರಾರಂಭವಿರಲಿ ರಾತ್ರಿಯ ಉತ್ತಮ ನಿದ್ರೆಯಿರಲಿ ಮಲಗುವ ಕೋಣೆ ಮಹತ್ವ ಪಡೆಯುತ್ತದೆ. ಇಲ್ಲಿ ವಿಶ್ರಾಂತಿ ಪಡೆಯುವುದರ ಜೊತೆಗೆ ನಮ್ಮ ಜೀವನದ ಒಳ್ಳೆಯ ಮತ್ತು ಕೆಟ್ಟ ನಿರ್ಧಾರಗಳನ್ನು ಇಲ್ಲಿ ತೆಗೆದುಕೊಳ್ಳುತ್ತೇವೆ. ಹಾಗಾಗಿ ಮಲಗುವ ಕೋಣೆ ವಾಸ್ತು ಪ್ರಕಾರವಿದ್ರೆ ಒಳ್ಳೆಯದು.
ವಾಸ್ತು ಶಾಸ್ತ್ರದ ಪ್ರಕಾರ, ಹಳದಿ ಬಣ್ಣವನ್ನು ಮಲಗುವ ಕೋಣೆಯಲ್ಲಿ ಬಳಸಬೇಕು. ಕೆಂಪು ಬಣ್ಣವನ್ನು ಸಹ ಬಳಸಬಹುದು. ಈ ಬಣ್ಣಗಳು ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತವೆ. ಮನೆಯಲ್ಲಿ ಸಮೃದ್ಧಿ ನೆಲೆಸಲು ಕಾರಣವಾಗುತ್ತದೆ.
ಮಲಗುವ ಕೋಣೆಯಲ್ಲಿರುವ ಸಾಮಾನುಗಳನ್ನು ಸರಿಯಾಗಿ ಜೋಡಿಸಿಡಿ. ವಸ್ತುಗಳು ಚೆಲ್ಲಾಪಿಲ್ಲಿಯಾಗಿರದಂತೆ ನೋಡಿಕೊಳ್ಳಿ. ಮಲಗುವ ಕೋಣೆ ಸ್ವಚ್ಛವಾಗಿಲ್ಲದೆ ಹೋದ್ರೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ.
ನಿಮ್ಮ ಮಂಚದ ಮುಂದೆ ಎಂದೂ ಕನ್ನಡಿಯನ್ನು ಹಾಕಬೇಡಿ. ಕನ್ನಡಿ ಮುಂದೆ ಅಪ್ಪಿತಪ್ಪಿಯೂ ಮಲಗಬಾರದು. ಇದು ದಾಂಪತ್ಯ ಹಾಳಾಗಲು ಕಾರಣವಾಗುತ್ತದೆ.
ಮಲಗುವ ಕೋಣೆಯಲ್ಲಿ ಪೂರ್ವಜರು ಹಾಗೂ ಯಾವುದೇ ಪ್ರಾಣಿಯ ಫೋಟೋಗಳನ್ನು ಹಾಕಬಾರದು.