ಗುಲಾಬಿ ಹೂವಿನ ಬಣ್ಣದ ತುಟಿ ಇರಬೇಕು ಎಂಬ ಆಸೆ ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗೆ ಇರುತ್ತದೆ. ಕಲವರಿಗೆ ಚಳಿಗಾಲ ಬಂತೆಂದರೆ ತುಟಿ ಒಡೆಯುವುದು, ಅದರ ಅಂದಗೆಡುವುದು ಹೀಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತವೆ.
ತುಟಿಯ ಆರೋಗ್ಯದ ಜತೆಗೆ ಕೆಂಪಾದ ತುಟಿಯನ್ನು ಹೊಂದುವ ಆಸೆ ಇರುವವರಿಗೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.
ಸೂರ್ಯನ ಬೆಳಕಿಗೆ ಜಾಸ್ತಿ ಮುಖವನ್ನು ಒಡ್ಡುವುದರಿಂದ ತುಟಿಯು ಕಪ್ಪಾಗುತ್ತದೆ. ಕೆಲವೊಮ್ಮೆ ಅಲರ್ಜಿಯ ಪರಿಣಾಮದಿಂದ ತುಟಿಯು ತನ್ನ ರಂಗನ್ನು ಕಳೆದುಕೊಳ್ಳುತ್ತದೆ. ಕಡಿಮೆ ಗುಣಮಟ್ಟದ ಉತ್ಪನ್ನಗಳನ್ನು ತುಟಿಗೆ ಬಳಸುವುದರಿಂದ, ಜಾಸ್ತಿ ಕೆಫಿನ್ ಅಂಶದ ವಸ್ತುಗಳ ಸೇವನೆ, ಹಾರ್ಮೋನುಗಳ ಬದಲಾವಣೆಯಿಂದ ತುಟಿಯ ರಂಗು ಮಾಸುತ್ತದೆ. ದುಬಾರಿ ಬೆಲೆ ತೆತ್ತು ಉತ್ಪನ್ನಗಳನ್ನು ಬಳಸಿ ತುಟಿಯ ಆರೋಗ್ಯ ಹಾಳು ಮಾಡಿಕೊಳ್ಳುವುದಕ್ಕಿಂತ ನೈಸರ್ಗಿಕವಾಗಿ ಸಿಗುವ ವಸ್ತು ಬಳಸಿ ತುಟಿಯನ್ನು ಆರೋಗ್ಯಕರವಾಗಿರಿಸಿಕೊಳ್ಳಿ.
* ಜೇನುತುಪ್ಪ ಹಾಗೂ ಸಕ್ಕರೆ ಸ್ಕ್ರಬ್ ನಿಂದ ತುಟಿಗೆ ನಿಧಾನವಾಗಿ ಮಸಾಜ್ ಮಾಡುವುದರಿಂದ ತುಟಿಯ ಮೇಲಿರುವ ಡೆಡ್ ಸ್ಕಿನ್ ಗಳು ನಿವಾರಣೆಯಾಗುತ್ತದೆ. 1 ಟೇಬಲ್ ಸ್ಪೂನ್ ಬ್ರೌನ್ ಶುಗರ್, 1 ಟೇಬಲ್ ಸ್ಪೂನ್ ಜೇನುತುಪ್ಪ ಇವೆರೆಡನ್ನು ಒಂದು ಬೌಲ್ ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನತರ ಕೈ ಬೆರಳಿನ ಸಹಾಯದಿಂದ ನಿಧಾನಕ್ಕೆ ನಿಮ್ಮ ತುಟಿಯ ಮೇಲೆ ಮಸಾಜ್ ಮಾಡಿ. ಇದರಿಂದ ರಕ್ತ ಸಂಚಲನೆ ಚೆನ್ನಾಗಿ ಆಗುತ್ತದೆ, ಹಾಗೇ ತುಟಿಯು ಆರೋಗ್ಯಕರವಾಗಿರುತ್ತದೆ. ಕಂದು ಬಣ್ಣ ನಿಧಾನಕ್ಕೆ ಕಡಿಮೆ ಯಾಗುತ್ತದೆ.
ಒಂದು ಮುಷ್ಟಿ ದಾಳಿಂಬೆ ಬೀಜಗಳನ್ನು ತೆಗೆದುಕೊಳ್ಳಿ. ಇದನ್ನು ಮಿಕ್ಸಿಯ ಸಹಾಯದಿಂದ ರುಬ್ಬಿಕೊಳ್ಳಿ. ಸ್ವಲ್ಪ ಹಾಲಿನ ಕೆನೆ ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ತುಟಿಗೆ ಹಚ್ಚಿ 15 ನಿಮಿಷ ಹಾಗೇ ಬಿಡಿ. ನಂತರ ತೊಳೆದುಕೊಳ್ಳಿ. ಇದರಿಂದ ತುಟಿಯ ರಂಗು ಕೆಂಪಾಗುತ್ತದೆ.