ಸ್ವಂತ ಮನೆಯಿರಬೇಕು, ಅದ್ರ ಮುಂದೊಂದು ಕಾರ್ ಇರಬೇಕು ಎನ್ನುವುದು ಎಲ್ಲರ ಕನಸು. ಎಷ್ಟೇ ಕಷ್ಟಪಟ್ಟರೂ ಕೆಲವರ ಕನಸು ಪೂರ್ಣವಾಗುವುದಿಲ್ಲ. ಜ್ಯೋತಿಷ್ಯಶಾಸ್ತ್ರ ಇದಕ್ಕೊಂದು ಉಪಾಯ ಹೇಳಿದೆ. ಪ್ರತಿ ಭಾನುವಾರ ಕೆಲವೊಂದು ನಿಯಮಗಳನ್ನು ತಪ್ಪದೆ ಪಾಲಿಸಿದ್ರೆ ಫಲ ನಿಶ್ಚಿತ.
ಭಾನುವಾರ ಆರಂಭಿಸಿ 108 ದಿನಗಳ ಕಾಲ ಕೆಂಪು ಹಸುವಿಗೆ ಕಾಕಂಬಿಯನ್ನು ತಿನ್ನಿಸಿ.
12 ಭಾನುವಾರ ಬಿಳಿ ಹಸು ಹಾಗೂ ಕರುವಿಗೆ ಕಾಕಂಬಿಯನ್ನು ನೀಡಿ.
12 ಭಾನುವಾರ ಗಣೇಶ ದೇವಸ್ಥಾನಕ್ಕೆ ಹೋಗಿ ಗೋಧಿ ಮತ್ತು ಕಾಕಂಬಿಯನ್ನು ಅರ್ಪಿಸಿ.
ಭಾನುವಾರ ಬೇವಿನ ಮರದ ಕೊಂಬೆಗಳನ್ನು ಬಳಸಿ ಚಿಕ್ಕ ಮನೆ ಮಾಡಿ ಅದನ್ನು ದೇವಸ್ಥಾನಕ್ಕೆ ನೀಡಿ.
12 ಭಾನುವಾರ ಕಬ್ಬಿಣದಿಂದ ಮಾಡಿದ ಕಾರನ್ನು ಭೈರವ ದೇವಸ್ಥಾನಕ್ಕೆ ದಾನ ಮಾಡುತ್ತ ಬನ್ನಿ.
ಭಾನುವಾರದಿಂದ 108 ದಿನಗಳ ಕಾಲ ಬೆಳಿಗ್ಗೆ ಗಣೇಶ ದೇವಸ್ಥಾನಕ್ಕೆ ಹೋಗಿ ಕೆಂಪು ಹೂವನ್ನು ನೀಡಿ.
ಮಣ್ಣಿನಿಂದ ಮಾಡಿದ ದೀಪವನ್ನು ದೇವರ ಮನೆಯಲ್ಲಿಡಿ. ಭಾನುವಾರ ಅದಕ್ಕೆ ಸಾಸಿವೆ ಎಣ್ಣೆಯನ್ನು ಹಾಕಿ ದೀಪ ಬೆಳಗಿ. ಹಾಗೆ ಮನೆ ನೀಡುವಂತೆ ಪ್ರಾರ್ಥನೆ ಮಾಡಿ.