ಕಣ್ಣು ರೆಪ್ಪೆ ದಪ್ಪಗೆ, ಕಪ್ಪಗೆ ಇರಬೇಕೆಂಬುದು ಎಲ್ಲ ಮಹಿಳೆಯರ ಆಸೆ. ಸಮಾರಂಭಗಳಲ್ಲಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಮಹಿಳೆಯರು ನಕಲಿ ಕಣ್ರೆಪ್ಪೆ ಹಾಕಿಕೊಂಡು ಹೋಗ್ತಾರೆ. ಇದು ತಾತ್ಕಾಲಿಕ ಮಾತ್ರ. ಕಣ್ಣಿನ ರೆಪ್ಪೆ ಸದಾ ದಪ್ಪಗೆ, ಹೊಳೆಯುತ್ತಿ ರಬೇಕೆಂದ್ರೆ ನಿಮ್ಮ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಬೇಕು. ಯಾವುದೇ ಸೌಂದರ್ಯ ವರ್ಧಕವನ್ನು ಬಳಸದೆ ನೈಸರ್ಗಿಕವಾಗಿ ಕಣ್ರೆಪ್ಪೆಯ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.
ಒಣ ಹಣ್ಣುಗಳು ಕಣ್ರೆಪ್ಪೆ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿ. ಕಣ್ರೆಪ್ಪೆ ದಟ್ಟವಾಗಿ ಬರಲು ಇದು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಒಣಹಣ್ಣುಗಳಿರಲಿ.
ಅಣಬೆಗಳಲ್ಲಿ ವಿಟಮಿನ್ ಬಿ 3 ಹೆಚ್ಚಿರುತ್ತದೆ. ಇದು ದೇಹದ ಕ್ಯಾರೋಟಿನ್ ಹೆಚ್ಚಿಸಲು ಕಾರಣವಾಗುತ್ತದೆ. ಇದರ ಬಳಕೆಯಿಂದಾಗಿ ಕಣ್ರೆಪ್ಪೆ ಉದ್ದ ಮತ್ತು ದಪ್ಪವಾಗುತ್ತದೆ.
ವಿಟಮಿನ್ ಸಿ ಮತ್ತು ವಿಟಮಿನ್ ಎ ಇರುವ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬೇಕು. ತರಕಾರಿಗಳನ್ನು ಸೇವಿಸುವುದರಿಂದ ಕಣ್ಣುರೆಪ್ಪೆಗಳು ಉದ್ದ, ದಪ್ಪ ಮತ್ತು ಬಲವಾಗಿರುತ್ತವೆ.
ನಿದ್ದೆ ಮಾಡುವ ಮೊದಲು ನಿಮ್ಮ ಮುಖವನ್ನು ತೊಳೆದು, ನಿಮ್ಮ ಕಣ್ಣುರೆಪ್ಪೆಗಳ ಮೇಲೆ ಆಲಿವ್ ಎಣ್ಣೆಯನ್ನು ಹಚ್ಚಿ. ಪ್ರತಿ ದಿನ ಹೀಗೆ ಮಾಡುತ್ತ ಬಂದಲ್ಲಿ ನಿಮ್ಮ ಕಣ್ರೆಪ್ಪೆ ದಟ್ಟವಾಗಿ, ಉದ್ದವಾಗಿ ಬೆಳೆಯುತ್ತದೆ.
ಮೊಟ್ಟೆಗಳನ್ನು ಸೇವಿಸಿದ ನಂತರ ಕಣ್ಣುರೆಪ್ಪೆ ಉದ್ದವಾಗುತ್ತವೆ.