ಮಹಿಳೆಯನ್ನು ಮನೆಯ ಲಕ್ಷ್ಮಿ ಎನ್ನಲಾಗುತ್ತದೆ. ಮದುವೆಯಾದ ನಂತ್ರ ಮಹಿಳೆಯ ಅದೃಷ್ಟ ಬದಲಾಗುತ್ತದೆ. ಜೊತೆಗೆ ಆಕೆಯ ಗಂಡನ ಮನೆಯವರಲ್ಲೂ ಸಾಕಷ್ಟು ಬದಲಾವಣೆಯಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಗೆ ಬಂದ ವಧು, ರಾತ್ರಿ ಸಮಯದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದು. ಆಕೆ ಆ ಕೆಲಸಗಳನ್ನು ಮಾಡಿದ್ರೆ ಆಕೆ ಹಾಗೂ ಆಕೆಯ ಗಂಡನ ಮನೆಯವರ ಅದೃಷ್ಟ ಎಂದೂ ಬದಲಾಗಲು ಸಾಧ್ಯವಿಲ್ಲ.
ಸೂರ್ಯಾಸ್ತದ ನಂತ್ರ ಬೇರೆ ಮನೆಯಿಂದ ಹಾಲು, ತುಪ್ಪ, ಮೊಸರು, ಬೆಣ್ಣೆ, ಎಣ್ಣೆ ಹಾಗೂ ಈರುಳ್ಳಿಯನ್ನು ತರಬಾರದು. ಇದರಿಂದ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಮಲಗುವ ಮೊದಲು ಮಹಿಳೆಯರು ತಲೆ ಸ್ನಾನ ಮಾಡಬಾರದು. ಹೀಗೆ ಮಾಡುವುದು ಹಾನಿಕಾರಕ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ.
ಕೊಳಕಾದ ಪಾತ್ರೆಗಳನ್ನು ರಾತ್ರಿ ತೊಳೆಯದೆ ಹಾಗೆ ಇಡಬಾರದು. ಮನೆ ಸ್ವಚ್ಛವಾಗಿದ್ದಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ. ಸುಖ-ಶಾಂತಿ, ಸಮೃದ್ಧಿ ನಿಮ್ಮದಾಗುತ್ತದೆ.
ವಾರಕ್ಕೊಮ್ಮೆ ಮನೆಯ ಮಹಿಳೆ, ರಾತ್ರಿ ಮಲಗುವ ಮೊದಲು ಒಂದು ಪೇಪರ್ ನಲ್ಲಿ ಉಪ್ಪು ಕಟ್ಟಿ ಅದನ್ನು ಮನೆಯ ಎಲ್ಲ ಕೋಣೆಗಳಲ್ಲಿ ಇಡಬೇಕು. ಬೆಳಿಗ್ಗೆ ಎದ್ದ ತಕ್ಷಣ ಯಾರ ಬಳಿಯೂ ಮಾತನಾಡದೆ ಅದನ್ನು ಹೊರಗೆ ಎಸೆಯಬೇಕು. ಹೀಗೆ ಮಾಡಿದಲ್ಲಿ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.