ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಲಾಗುತ್ತದೆ. ಶಿವನನ್ನು ಒಲಿಸಿಕೊಳ್ಳಲು ಭಕ್ತರು ಕೆಲವೊಂದು ವಸ್ತುಗಳನ್ನು ಪೂಜೆಗೆ ಬಳಸ್ತಾರೆ. ಈಶ್ವರನ ಕೃಪೆ ಬಯಸುವವರು ಶ್ರಾವಣ ಮಾಸದಲ್ಲಿ ಅವಶ್ಯವಾಗಿ ಈ ವಸ್ತುಗಳನ್ನು ಬಳಸಿ.
ಜ್ವರದಿಂದ ಬಳಲುತ್ತಿರುವವರು ಶಿವನಿಗೆ ಶ್ರಾವಣ ಮಾಸದಲ್ಲಿ ಜಲ ಅರ್ಪಿಸಬೇಕು. ಶಿವನಿಗೆ ಜಲ ಅರ್ಪಿಸಿದ್ರೆ ಭಗವಂತ ಬೇಗ ಕೃಪೆ ತೋರುತ್ತಾನೆಂಬ ನಂಬಿಕೆಯಿದೆ.
ಬುದ್ಧಿಶಕ್ತಿ ವೃದ್ಧಿಗೆ ಸಕ್ಕರೆ ಮಿಶ್ರಿತ ಹಾಲನ್ನು ಶ್ರಾವಣ ಮಾಸದಲ್ಲಿ ಶಿವನಿಗೆ ಅರ್ಪಿಸಬೇಕು.
ಜೀವನದಲ್ಲಿ ಸುಖ-ಶಾಂತಿ ಬೇಕೆನ್ನುವವರು ಶ್ರಾವಣ ಮಾಸದಲ್ಲಿ ಶಿವನಿಗೆ ಕಬ್ಬಿನ ಹಾಲನ್ನು ಅರ್ಪಿಸಿ ಪೂಜೆ ಮಾಡಬೇಕು.
ಶಿವನಿಗೆ ಗಂಗಾ ಜಲವನ್ನು ಅರ್ಪಿಸುವುದ್ರಿಂದ ಆನಂದ ಹಾಗೂ ಮೋಕ್ಷ ಎರಡೂ ಪ್ರಾಪ್ತಿಯಾಗುತ್ತದೆ.
ಜೇನುತುಪ್ಪದ ಅಭಿಷೇಕ ಮಾಡುವುದ್ರಿಂದ ಟಿಬಿ ರೋಗದಿಂದ ಮುಕ್ತಿ ಸಿಗುತ್ತದೆ.
ಆಕಳಿನ ಶುದ್ಧ ತುಪ್ಪದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿದ್ರೆ ದೈಹಿಕ ದೌರ್ಬಲ್ಯ ದೂರವಾಗಿ ಶಕ್ತಿ ಸಿಗುತ್ತದೆ.