ಸುಖ-ಸಮೃದ್ಧಿ ಸೇರಿದಂತೆ ಆರೋಗ್ಯ, ಆಯುಸ್ಸು ವೃದ್ಧಿಗೆ ಪ್ರತಿದಿನ ದೇವರ ಪೂಜೆ ಮಾಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅನೇಕರ ಮನೆಯಲ್ಲಿ ಈಗಲೂ ಪ್ರತಿದಿನ ದೇವರ ಪೂಜೆ ಮಾಡ್ತಾರೆ. ಶ್ರದ್ಧಾ ಭಕ್ತಿಯಿಂದ ದೇವರ ಪೂಜೆ ಮಾಡಿದ್ರೆ ನಮ್ಮ ಇಷ್ಟಗಳು ಈಡೇರುತ್ತವೆ ಎಂದು ನಂಬಲಾಗಿದೆ.
ಆದ್ರೆ ಪೂಜೆ ಮಾಡುವ ವೇಳೆ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಪೂಜೆ ವೇಳೆ ನಾವು ಮಾಡುವ ತಪ್ಪುಗಳು ನಮ್ಮ ಯಶಸ್ಸಿಗೆ ಅಡ್ಡಿಯುಂಟು ಮಾಡುವ ಸಾಧ್ಯತೆ ಇರುತ್ತದೆ.
ಸೂರ್ಯ, ಗಣೇಶ, ದುರ್ಗಾ, ಶಿವ ಮತ್ತು ವಿಷ್ಣುವನ್ನು ಪಂಚ ದೇವತೆಗಳೆಂದು ಕರೆಯಲಾಗುತ್ತದೆ. ಪ್ರತಿದಿನ ಪೂಜೆ ಮಾಡುವ ಸಮಯದಲ್ಲಿ ಈ ಪಂಚ ದೇವರನ್ನು ನೆನೆಯಬೇಕು. ಇದ್ರಿಂದ ಸಂತೋಷ ಮತ್ತು ಸಮೃದ್ಧಿ ನಮ್ಮದಾಗುತ್ತದೆ.
ಶಿವ, ಗಣೇಶ ಮತ್ತು ಭೈರವನಿಗೆ ಎಂದೂ ತುಳಸಿ ಹಾಕಬಾರದು. ದೇವಿ ದುರ್ಗೆಗೆ ದರ್ಬೆಯನ್ನು ಹಾಕಬಾರದು. ದರ್ಬೆಯನ್ನು ಗಣೇಶನಿಗೆ ಮಾತ್ರ ಅರ್ಪಿಸಬೇಕು. ಸೂರ್ಯ ದೇವನಿಗೆ ಶಂಖದ ನೀರನ್ನು ಅರ್ಪಿಸಬಾರದು. ಸ್ನಾನ ಮಾಡದೆ ತುಳಸಿ ಗಿಡವನ್ನು ಮುಟ್ಟಬಾರದು.
ಪ್ರತಿದಿನ ಯಾರ ಮನೆಯಲ್ಲಿ ದೇವರ ಪೂಜೆ ಮಾಡಲಾಗುತ್ತದೆಯೋ ಆ ಮನೆಯಲ್ಲಿ ಧನ-ದಾನ್ಯದ ಕೊರತೆಯಾಗುವುದಿಲ್ಲ.
ಪ್ಲಾಸ್ಟಿಕ್ ಬಾಟಲಿ ಅಥವಾ ಅಪವಿತ್ರ ಪಾತ್ರೆಯಲ್ಲಿ ಗಂಗಾ ಜಲವನ್ನು ಹಾಕಬಾರದು.
ಎಂದೂ ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಬಾರದು. ಹೀಗೆ ದೀಪ ಹಚ್ಚಿದ ವ್ಯಕ್ತಿ ರೋಗಿಷ್ಟನಾಗ್ತಾನೆ.
ಬುಧವಾರ ಮತ್ತು ಭಾನುವಾರ ಅಶ್ವತ್ಥ ಮರಕ್ಕೆ ನೀರನ್ನು ಮರೆತೂ ಹಾಕಬಾರದು.
ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ದೇವರ ಪೂಜೆ ಮಾಡಬೇಕು.