alex Certify ಮನೆಯಲ್ಲಿ ಗಿಳಿ ಸಾಕುವವರು ಶಾಸ್ತ್ರದಲ್ಲಿ ತಿಳಿಸಿದ ಈ ನಿಯಮ ಪಾಲಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಗಿಳಿ ಸಾಕುವವರು ಶಾಸ್ತ್ರದಲ್ಲಿ ತಿಳಿಸಿದ ಈ ನಿಯಮ ಪಾಲಿಸಿ

Parrot: ಮನೆಯಲ್ಲಿ ಗಿಣಿ ಸಾಕುವುದರಿಂದ ದಾಂಪತ್ಯ ಜೀವನ ಸುಮಧುರವಾಗಿರುತ್ತದೆ, ದಾಂಪತ್ಯದಲ್ಲಿ ಶಾಂತಿ-ಸಂತೋಷ ತುಳುಕುತ್ತದೆ - Astro tips preserving parrot in home is auspicious or ...

ಅನೇಕ ಜನರು ಮನೆಯಲ್ಲಿ ಸಾಕು ಪ್ರಾಣಿ ಮತ್ತು ಪಕ್ಷಿಗಳನ್ನು ಇರಿಸಿಕೊಳ್ಳುತ್ತಾರೆ. ಇದರಿಂದ ಅವರು ತಮ್ಮ ಕೆಲವು ಸಮಯವನ್ನು ಇವುಗಳ ಜೊತೆ ಕಳೆಯಲು ಬಯಸುತ್ತಾರೆ. ಆದರೆ ಈ ಪ್ರಾಣಿ, ಪಕ್ಷಿಗಳನ್ನು ಸಾಕುವಾಗ ಕೆಲವು ಶಾಸ್ತ್ರಗಳನ್ನು ಅನುಸರಿಸಬೇಕು. ಇಲ್ಲವಾದರೆ ಇದರಿಂದ ನಿಮಗೆ ಕೆಡುಕ್ಕಾಗಬಹುದು. ಹಾಗಾಗಿ ಮನೆಯಲ್ಲಿ ಗಿಳಿ ಸಾಕುವವರು ಶಾಸ್ತ್ರದಲ್ಲಿ ತಿಳಿಸಿದ ಈ ನಿಯಮ ಪಾಲಿಸಿ.

ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಿಳಿಯನ್ನು ಸಾಕುವುದು ತುಂಬಾ ಮಂಗಳಕರವಂತೆ. ಇದು ಮನೆಯಲ್ಲಿ ಸಕರಾತ್ಮಕತೆಯನ್ನು ಹೆಚ್ಚಿಸುತ್ತದೆಯಂತೆ ಮತ್ತು ಮನೆಯಲ್ಲಿ ಸಂತೋಷ ನೆಲೆಸುವಂತೆ ಮಾಡುತ್ತದೆಯಂತೆ. ಇದರಿಂದ ಮನೆಯ ಸದಸ್ಯರಲ್ಲಿ ಪ್ರೀತಿ, ವಾತ್ಸಲ್ಯ ಹೆಚ್ಚಾಗುತ್ತದೆಯಂತೆ.
ಹಾಗೇ ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿ ಗಿಳಿಯ ಪಂಜರವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕಂತೆ. ಇದರಿಂದ ಶುಭ ಫಲಿತಾಂಶ ಸಿಗುತ್ತದೆಯಂತೆ. ಯಾಕೆಂದರೆ ಉತ್ತರ ದಿಕ್ಕು ಬುಧನಿಗೆ ಸಂಬಂಧಿಸಿದ್ದು, ಹಾಗೇ ಹಸಿರು ಬಣ್ಣ ಬುಧನ ಅಂಶವಾಗಿದೆಯಂತೆ. ಹಾಗೇ ಗಿಳಿ ಲಕ್ಷ್ಮಿ, ಕುಬೇರನಿಗೆ ಸಂಬಂಧಿಸಿದ್ದರಿಂದ ಇದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆಯಂತೆ.

ಆದರೆ ಗಿಳಿಯನ್ನು ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿ ಇಡಬಾರದಂತೆ. ಯಾಕೆಂದರೆ ಪಶ್ಚಿಮ ಸೂರ್ಯ ಮುಳುಗುವ ದಿಕ್ಕು ಮತ್ತು ದಕ್ಷಿಣ ಯಮ ಮತ್ತು ರಾಹುವಿನ ದಿಕ್ಕು.. ಈ ದಿಕ್ಕಿನಲ್ಲಿ ಗಿಳಿಯನ್ನು ಇಡುವುದರಿಂದ ಅನಾಹುತವಾಗುತ್ತದೆಯಂತೆ.

ಹಾಗಾಗಿ ಮನೆಯಲ್ಲಿ ಗಿಳಿಯನ್ನು ಸಾಕುವವರು ಈ ನಿಯಮವನ್ನು ತಪ್ಪದೇ ಪಾಲಿಸಿ. ಮತ್ತು ಗಿಳಿ ಯಾವಾಗಲೂ ಸಂತೋಷದಿಂದ ಇರುವಂತೆ ನೋಡಿಕೊಳ್ಳಿ, ಅವುಗಳಿಗೆ ಹಿಂಸೆ ನೀಡಬೇಡಿ. ಇದು ಒಳ್ಳೆಯದಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...