ಬಿಲ್ವಪತ್ರೆ ಶಿವನಿಗೆ ಬಹಳ ಪ್ರಿಯವಾದುದು, ಇದರ ಹಣ್ಣು ಕೂಡ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಬೀಟಾ ಕ್ಯಾರೊಟಿನ್, ಕ್ಯಾಲ್ಸಿಯಂ, ಥಯಾಮಿನ್, ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಹಾಗೇ ಇದು ಔಷಧೀಯ ಗುಣವನ್ನು ಹೊಂದಿದೆ. ಆದರೆ ಇದನ್ನು ಕೆಲವು ಜನರು ಸೇವಿಸುವುದನ್ನು ತಪ್ಪಿಸಬೇಕು.
ಕಿಡ್ನಿ ಕಲ್ಲುಗಳ ಸಮಸ್ಯೆ : ಕಿಡ್ನಿಯಲ್ಲಿ ಕಲ್ಲುಗಳ ಸಮಸ್ಯೆ ಇರುವವರು ಬಿಲ್ವದ ಹಣ್ಣನ್ನು ಸೇವಿಸಬೇಡಿ. ಇದರಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿರುವ ಕಾರಣ ಇದು ಕಲ್ಲುಗಳ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಮಲಬದ್ಧತೆ ಸಮಸ್ಯೆ : ಮಲಬದ್ಧತೆ ಸಮಸ್ಯೆ ಇರುವವರು ಈ ಹಣ್ಣನ್ನು ತಿನ್ನಬೇಡಿ. ಇದು ಹೊಟ್ಟೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಇದರಿಂದ ಗ್ಯಾಸ್, ಹೊಟ್ಟೆಯ ಊತ, ಸೆಳೆತ, ಆಮ್ಲೀಯತೆ ಮತ್ತು ಅಜೀರ್ಣ ಸಮಸ್ಯೆ ಕಾಡುತ್ತದೆ.
ಮಧುಮೇಹ : ಇದರಲ್ಲಿ ಸಕ್ಕರೆಯಂಶ ಹೆಚ್ಚಾಗಿರುತ್ತದೆ. ಹಾಗಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಾಗಾಗಿ ಮಧುಮೇಹಿಗಳು ಈ ಹಣ್ಣಿನ ಸೇವನೆಯನ್ನು ತಪ್ಪಿಸಿ.
ಥೈರಾಯ್ಡ್ : ಥೈರಾಯ್ಡ್ ಸಮಸ್ಯೆ ಇರುವವರು ಕೂಡ ಬಿಲ್ವದ ಹಣ್ಣನ್ನು ತಿನ್ನಬೇಡಿ. ಯಾಕೆಂದರೆ ಈ ಹಣ್ಣಿನಲ್ಲಿರುವ ಅಂಶ ಥೈರಾಯ್ಡ್ ಔಷಧಿಗಳ ಜೊತೆ ಪ್ರತಿಕ್ರಿಯಿಸುತ್ತದೆ. ಇದರಿಂದ ಸಮಸ್ಯೆಯಾಗಬಹುದು.
ಹಾಗಾಗಿ ಬಿಲ್ವ ಹಣ್ಣು ಎಷ್ಟೇ ರುಚಿಕರವಾಗಿ, ಆರೋಗ್ಯಕರವಾಗಿದ್ದರೂ ಕೂಡ ಈ ಮೇಲಿನ ಸಮಸ್ಯೆ ಇರುವವರು ಮಾತ್ರ ಅಪ್ಪಿತಪ್ಪಿಯೂ ಸೇವಿಸಬೇಡಿ.