
ಮನೆಯ ಶಾಂತಿ-ಸಮೃದ್ಧಿಗಾಗಿ ವಾಸ್ತು ಶಾಸ್ತ್ರ ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ಶಾಸ್ತ್ರ ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ. ವಾಸ್ತು ಶಾಸ್ತ್ರ ಆರ್ಥಿಕ ವೃದ್ಧಿಗೆ ನೆರವಾಗುತ್ತದೆ. ಮನೆಯಲ್ಲಿರುವ ಕೆಲವೊಂದು ವಸ್ತುಗಳು ಸುಖ-ಸಮೃದ್ಧಿಗೆ ಅಡ್ಡಿಯುಂಟು ಮಾಡುತ್ತವೆ. ಅಂತ ವಸ್ತುಗಳನ್ನು ಅಪ್ಪಿತಪ್ಪಿಯೂ ಮನೆಯಲ್ಲಿಡಬೇಡಿ ಎಂದು ವಾಸ್ತು ಶಾಸ್ತ್ರದಲ್ಲಿ ಸಲಹೆ ನೀಡಲಾಗಿದೆ.
ಮನೆಯ ಒಳಗೆ ಎಂದೂ ಮುಳ್ಳಿನ ಗಿಡಗಳನ್ನು ಬೆಳೆಸಬೇಡಿ. ಇದ್ರಿಂದ ನಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ಹಾಗಾಗಿ ಮುಳ್ಳಿನ ಗಿಡಗಳನ್ನು ಮನೆಯ ಹೊರಗೆ ಇಡುವುದು ಒಳ್ಳೆಯದು.
ಮನೆಯಲ್ಲಿ ಕೊಳಕು ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ಮನೆಯೊಳಗೆ ಕೊಳಕು ನೀರು ಇರುವುದು ಶುಭವಲ್ಲ. ಇದ್ರಿಂದ ಮನೆಯಲ್ಲಿರುವ ಲಕ್ಷ್ಮಿ ಕೋಪಗೊಳ್ತಾಳೆ.
ಮನೆಯ ಒಳಗೆ ಹಾಗೂ ಹೊರಗೆ ಎಂದೂ ಕೊಳಕಾದ ಬಟ್ಟೆಗಳನ್ನು ಇಡಬೇಡಿ. ಇದ್ರಿಂದ ಮನೆಯ ಸದಸ್ಯರ ಮಧ್ಯೆ ಸದಾ ಗಲಾಟೆಯಾಗುತ್ತದೆ.
ಮನೆಯ ಮುಖ್ಯ ದ್ವಾರವನ್ನು ಸ್ವಚ್ಛವಾಗಿಡಿ. ಕಸ-ಕಡ್ಡಿ ತುಂಬಿರದಂತೆ ನೋಡಿಕೊಳ್ಳಿ. ಸ್ವಚ್ಛವಾಗಿರುವ ಸ್ಥಳಕ್ಕೆ ಮಾತ್ರ ತಾಯಿ ಲಕ್ಷ್ಮಿ ಪ್ರವೇಶ ಮಾಡ್ತಾಳೆ.