ಪ್ರೀತಿ ಮಾಯೆ ಹುಷಾರು ಅಂತಾರೆ. ಹಾಗಾಗಿ ಲವ್ ವಿಷಯದಲ್ಲಿ ಸ್ವಲ್ಪ ಜಾಸ್ತೀನೇ ಎಚ್ಚರಿಕೆಯಿಂದ ಇರಬೇಕು. ನಾವು ಮಾಡುವ ಒಂದೇ ಒಂದು ತಪ್ಪು ಒಂದೊಳ್ಳೆ ಸಂಬಂಧವನ್ನೇ ಮುರಿದು ಹಾಕಿಬಿಡಬಹುದು. ಆ ತಪ್ಪುಗಳು ಯಾವುವು ಅನ್ನೋದನ್ನ ನೋಡೋಣ.
ಅವನು/ಅವಳ ಫೋನ್ ಕರೆಗಾಗಿ ಕಾಯವುದು : ನೀವು ಹೈಸ್ಕೂಲ್ ಮುಗಿಸಿದ್ದೀರಾ ಅಂತಾದ್ರೆ ದೃಢ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ನಿಮ್ಮಲ್ಲಿ ಬಂದಿರುತ್ತೆ. ಯಾರಾದ್ರೂ ನಿಮ್ಮ ಮೆಸೇಜ್ ಗಳಿಗೆ ಅಥವಾ ಫೋನ್ ಕರೆಗೆ ಪ್ರತಿಕ್ರಿಯಿಸದೇ ಇದ್ರೆ ತಲೆಕೆಡಿಸಿಕೊಳ್ಬೇಡಿ. ನೀವೇ ಮುಂದಾಗಿ ಕರೆ ಮಾಡಿ ಅಥವಾ ಅದನ್ನಲ್ಲಿಗೇ ಬಿಟ್ಟು ಮುಂದೆ ಸಾಗಿ.
ನಿಮ್ಮನ್ನು ಲಘುವಾಗಿ ಪರಿಗಣಿಸುವ ಜೊತೆಗಾರ : ಪ್ರಬುದ್ಧರಾಗಿದ್ರೆ ಯಾವ ಸಂಬಂಧದಿಂದಾದ್ರೂ ಹೊರನಡೆಯುವುದು ಸುಲಭ. ನಿಮಗೆ ಹಿಂಸೆ ಉಂಟು ಮಾಡುವ, ಮುಜುಗರ ತರುವ ಸಂಬಂಧವನ್ನು ಮುಂದುವರಿಸಬೇಕಾಗಿಯೇ ಇಲ್ಲ. ಒಂದೊಳ್ಳೆ ಕಾರಣವಿದ್ರೆ ಸಂಬಂಧ ಕಡಿದುಕೊಳ್ಳಿ.
ಲೈಂಗಿಕ ಸಂಬಂಧ ಗಂಭೀರ ವಿಷಯ : ಯಾರು ಸಂಬಂಧವನ್ನು ಅರ್ಥಮಾಡಿಕೊಳ್ತಾರೋ ಅವರು ಸಂಭೋಗ ವೈಯಕ್ತಿಕ ಅವಶ್ಯಕತೆ ಎಂಬುದನ್ನು ಅರಿತಿರುತ್ತಾರೆ. ಅದನ್ನೇ ದೊಡ್ಡ ವಿಷಯ ಮಾಡಿದರೆ ಪ್ರೀತಿಗೆ ಧಕ್ಕೆ ಬರಬಹುದು.
ಕಡಿಮೆ ನಿರೀಕ್ಷೆ : ಸರಿಯಾದ ವಯಸ್ಸಿನಲ್ಲಿ ನಮಗೆ ಜೊತೆಗಾರ ಅಥವಾ ಜೊತೆಗಾತಿ ಸಿಗಲಿಲ್ಲ ಅಂದಾಕ್ಷಣ ನಮ್ಮ ನಿರೀಕ್ಷೆ ಅತಿಯಾಗಿದೆ ಅಂತಾ ಸಮಾಜ ಬೊಟ್ಟು ಮಾಡುತ್ತದೆ. ಆದ್ರೆ ಪ್ರಬುದ್ಧ ಮನಃಸ್ಥಿತಿಯುಳ್ಳವರು ನಿರೀಕ್ಷೆ ಕಡಿಮೆ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅಡ್ಜಸ್ಟ್ ಮಾಡಿಕೊಳ್ಳುವ ಬದಲು ಸೂಕ್ತ ಸಂಗಾತಿ ಸಿಗುವವರೆಗೆ ಕಾಯಿರಿ ಅಥವಾ ಒಂಟಿಯಾಗಿ ಹ್ಯಾಪಿಯಾಗಿ ಇರಿ.
ಅಸೂಯೆ ಮತ್ತು ಅನುಮಾನ : ಅಸೂಯೆ ಮತ್ತು ಅನುಮಾನದಿಂದ್ಲೇ ಎಷ್ಟೋ ಸಂಬಂಧಗಳು ಮುರಿದು ಬೀಳುತ್ತವೆ. ಅತಿಯಾದ ಅಸೂಯೆ ಮತ್ತು ಪೊಸೆಸಿವ್ನೆಸ್ ರಿಲೇಶನ್ಷಿಪ್ ಗೆ ಕಂಟಕ. ನಿಮ್ಮ ಜೊತೆಗಾರ ಅಥವಾ ಜೊತೆಗಾತಿಯನ್ನು ಸಂಪೂರ್ಣವಾಗಿ ನಂಬಿದ್ದರೆ ಯಾವುದಕ್ಕೂ ಹೆದರುವ ಅವಶ್ಯಕತೆಯಿಲ್ಲ.
ನಿಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವುದು : ಪ್ರೀತಿ ನಮ್ಮನ್ನು ಕುರುಡರನ್ನಾಗಿ ಮಾಡುತ್ತದೆ. ನಾವು ಹುಚ್ಚು ಪ್ರೀತಿಯಲ್ಲಿ ಬಿದ್ದಾಗ ಒಳ್ಳೆಯದು, ಕೆಟ್ಟದ್ದು ನಮಗೆ ಅರಿವಾಗುವುದೇ ಇಲ್ಲ. ಅವರ ಹಿಂದೆ ಬಿದ್ದು ನಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತೇವೆ. ಆದ್ರೆ ಹಾಗೆ ಮಾಡದೆ ಅದರಲ್ಲೂ ಸಮತೋಲನ ಕಾಪಾಡಬೇಕು.
ನಂಬಿಕೆ ಮತ್ತು ಇಷ್ಟಗಳನ್ನು ಬದಲಾಯಿಸುವುದು : ಧರ್ಮ ಹಾಗೂ ನಂಬಿಕೆ ವಿಷಯದಲ್ಲಿ ಅಷ್ಟು ಬೇಗ ನೀವು ಯಾರನ್ನೂ ಬದಲಾಯಿಸಲು ಸಾಧ್ಯವಿಲ್ಲ. ಬದಲಾದರೆ ನೀವು ನಿಮ್ಮ ತತ್ವ ಮತ್ತು ನಂಬಿಕೆಗಳನ್ನು ಹೆಚ್ಚು ಸಮಯ ಪಾಲಿಸಲಾರರಿ ಎಂದರ್ಥ.
ಬ್ರೇಕ್ ಅಪ್ ಅಂತಾ ಸಮಯ ವ್ಯರ್ಥ ಮಾಡಬೇಡಿ : ನೀವು ಪ್ರಬುದ್ಧರಾಗಿದ್ರೆ ಎಲ್ಲವನ್ನೂ ಮರೆತು ಮುಂದೆ ಸಾಗುವುದು ಈಸಿ. ಬ್ರೇಕ್ ಅಪ್ ಅಂತಾ ಕೊರಗುತ್ತ ನಿಮ್ಮ ಅಮೂಲ್ಯವಾದ ಕಣ್ಣೀರನ್ನು ವ್ಯರ್ಥ ಮಾಡಬೇಡಿ.
ಗೆಳೆಯ/ಗೆಳತಿಯರನ್ನೆಲ್ಲ ಮರೆತುಬಿಡುವುದು : ಬಾಯ್ ಫ್ರೆಂಡ್/ಗರ್ಲ್ ಫ್ರೆಂಡ್ ಸಿಕ್ಕ ತಕ್ಷಣ ಸ್ನೇಹಿತರನ್ನು ಮರೆತೇ ಬಿಡ್ತಾರೆ ಅನ್ನೋ ಮಾತಿದೆ. ಹಾಗೆ ಮಾಡಬೇಡಿ, ಮುಂದೊಮ್ಮೆ ಪಶ್ಚಾತ್ತಾಪ ಪಡಬೇಕಾಗಬಹುದು. ಸ್ನೇಹಿತರು ನಮ್ಮ ಬೆನ್ನೆಲುಬಿದ್ದಂತೆ, ಅವರನ್ನು ಮರೆಯುವಂತಿಲ್ಲ.
ಲಾಭಕ್ಕಾಗಿ ಸಂಬಂಧ ಬೆಳೆಸುವುದು : ಸಂಬಂಧ ಕೊಡುವುದು-ತೆಗೆದುಕೊಳ್ಳುವುದು ಆಗಿಬಿಟ್ಟಲ್ಲಿ ಅದಕ್ಕೆ ಅಸ್ತಿತ್ವವೇ ಇರುವುದಿಲ್ಲ. ಹಣ, ಸೆಕ್ಸ್ ಅಥವಾ ಇತರ ಯಾವುದೇ ಪ್ರಯೋಜನಗಳಿಗಾಗಿ ಸಂಬಂಧ ಬೆಳೆಸಿದ್ರೆ ಅದು ಸಂಬಂಧವೇ ಅಲ್ಲ. ಅದರ ಅಂತ್ಯ ತ್ರಾಸದಾಯಕವಾಗಿರುತ್ತದೆ.
ನಿಯಮಬದ್ಧವಾಗಿ ನಡೆದುಕೊಳ್ಳುವುದು : ರೂಲ್ ಬುಕ್ ನಿಜ ಜೀವನದಲ್ಲಿ ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ. ನೀವು ನಿಯಮ ವಿಧಿಸಿದ್ದೀರಾ ಅಂದ್ರೆ ಯಾರಾದರೂ ಅದನ್ನು ಮೀರಬೇಕು ಎಂದೇ ಅರ್ಥ.