ಬೆಳಿಗ್ಗೆ ರಾಜನಂತೆ ಉಪಹಾರ ಸೇವಿಸಿ, ಮಧ್ಯಾಹ್ನ ಸಾಮಾನ್ಯರಂತೆ ಊಟ ಮಾಡಿ, ರಾತ್ರಿ ಬಡವರಂತೆ ಊಟವನ್ನು ಮಾಡಬೇಕೆಂದು ತಿಳಿದವರು ಹೇಳುತ್ತಾರೆ. ಇದರೊಂದಿಗೆ ಸಮಯಕ್ಕೆ ಸರಿಯಾಗಿ ಊಟ, ಉಪಹಾರ ಸೇವಿಸುವುದು ಒಳ್ಳೆಯದು. ಇಲ್ಲದಿದ್ದರೆ, ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಹೊತ್ತಲ್ಲದ ಹೊತ್ತಲ್ಲಿ ಊಟ, ಉಪಹಾರ ಸೇವಿಸಬಾರದು. ಅದರಲ್ಲಿಯೂ ರಾತ್ರಿ 8 ಗಂಟೆ ಬಳಿಕ ಊಟ ಮಾಡಬಾರದು ಎನ್ನುವುದು ತಿಳಿದವರ ಅಭಿಪ್ರಾಯವಾಗಿದೆ.
ಫಾಸ್ಟ್ ಫುಡ್, ಜಂಕ್ ಫುಡ್, ಕರಿದ ಎಣ್ಣೆ ಪದಾರ್ಥಗಳು, ನಾನ್ ವೆಜ್ ರಾತ್ರಿ 8 ಗಂಟೆಯ ಬಳಿಕ ತಿಂದು ಬಳಿಕ ವಿಳಂಬವಾಗಿ ಊಟ ಮಾಡುವುದು ಸರಿಯಲ್ಲ. 8 ಗಂಟೆಯ ಒಳಗೆ ಊಟವನ್ನು ಮುಗಿಸಿ, ರಾತ್ರಿ 10 ಗಂಟೆಯಿಂದ 10.30 ರ ಒಳಗೆ ನಿದ್ದೆ ಮಾಡಿದರೆ, ಒಳ್ಳೆಯದು. ಹಗಲಿಗಿಂತ ರಾತ್ರಿ ಆಹಾರವನ್ನು ಸೇವಿಸುವುದರ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ.
ಸಮಯದ ಅಭಾವ, ಕೆಲಸದ ಒತ್ತಡ ಮೊದಲಾದ ಕಾರಣಗಳಿಂದ ಟೈಮಿಗೆ ಸರಿಯಾಗಿ ಊಟ, ತಿಂಡಿ ಸೇವಿಸಲು ಸಾಧ್ಯವಾಗುವುದಿಲ್ಲ. ರಾತ್ರಿ 8 ಗಂಟೆಯ ಬಳಿಕ ಊಟ ಮಾಡುವುದರಿಂದ ಬಾಡಿ ಮಾಸ್ ಇಂಡೆಕ್ಸ್ ಜಾಸ್ತಿ ಬೆಳೆಯುತ್ತೆ ಎನ್ನಲಾಗಿದೆ. ಇನ್ನು ರಾತ್ರಿ 8 ಗಂಟೆಯೊಳಗೆ ಊಟ ಮಾಡುವುದರಿಂದ ಬಾಡಿ ಮಾಸ್ ಇಂಡೆಕ್ಸ್ ಕಡಿಮೆಯಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
8 ಗಂಟೆಯ ನಂತರದಲ್ಲಿ ಸ್ನ್ಯಾಕ್ಸ್ ಮೊದಲಾದವುಗಳನ್ನು ಸೇವಿಸುವುದರಿಂದ ಕೊಬ್ಬಿನ ಅಂಶ ಹೆಚ್ಚಾಗುತ್ತದೆ. ಹಗಲು ಸೇವಿಸುವ ಆಹಾರಗಳು, ನಿದ್ದೆ ಮಾಡುವುದರ ಆಧಾರದ ಮೇಲೆ ಆರೋಗ್ಯ, ತೂಕ ಏರುಪೇರಾಗುತ್ತವೆ. ಹೆಚ್ಚಿನವರು ರಾತ್ರಿಯಲ್ಲಿ ಜಂಕ್ ಫುಡ್ ಸೇವಿಸುತ್ತಾರೆ. ಇದರಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಫೈಬರ್ ಪದಾರ್ಥ ಹೆಚ್ಚಿರುವ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಟೈಮಿಗೆ ಸರಿಯಾಗಿ ಊಟ-ತಿಂಡಿ ಮಾಡುವುದರಿಂದ ಆರೋಗ್ಯವಾಗಿರಬಹುದು. ರಾತ್ರಿ ಊಟದಲ್ಲಿ ಫೈಬರ್ ಯುಕ್ತ ಆಹಾರವಿದ್ದಲ್ಲಿ ತೂಕ ಹೆಚ್ಚಾಗುವ ಅಪಾಯ ಇರುವುದಿಲ್ಲ. ಇಂತಹ ಆಹಾರಗಳು ಮಲಗುವ ಮೊದಲು ಜೀರ್ಣವಾಗುವುದರಿಂದ ದೇಹಕ್ಕೆ ಒಳ್ಳೆಯದು. ರಾತ್ರಿ ಅಲ್ಪ ಆಹಾರ, ಹಣ್ಣುಗಳು ಒಳ್ಳೆಯದು. ಬೆಳಿಗ್ಗೆ, ಮಧ್ಯಾಹ್ನಕ್ಕಿಂತ ರಾತ್ರಿಯ ಊಟದ ವಿಷಯದಲ್ಲಿ ಜಾಗ್ರತೆ ವಹಿಸುವುದು ಒಳ್ಳೆಯದು.