ಮಳೆಗಾಲ ನಿಧಾನಕ್ಕೆ ಕಾಲಿಟ್ಟಿದೆ. ಆದರೆ ಬೇಸಿಲಿನ ಧಗೆ ಮಾತ್ರ ಕಡಿಮೆ ಆಗಿಲ್ಲ. ವಾತಾವರಣ ಬಿಸಿಯಾಗಿರುವ ಕಾರಣ ಹೆಚ್ಚಿನ ಜನರು ನೀರನ್ನು ಮಡಿಕೆಯಲ್ಲಿ ಸಂಗ್ರಹಿಸಿ ಕುಡಿಯುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಿಜ. ಆದರೆ ಇದನ್ನು ಸರಿಯಾದ ವಿಧಾನದಲ್ಲಿ ಸೇವಿಸಬೇಕು. ಇಲ್ಲವಾದರೆ ಆರೋಗ್ಯ ಕೆಡುತ್ತದೆಯಂತೆ.
ಮಡಿಕೆಯಲ್ಲಿರುವ ನೀರನ್ನು ತೆಗೆಯಲು ಹ್ಯಾಂಡಲ್ ಇರುವಂತಹ ಪಾತ್ರೆಯನ್ನು ಬಳಸಿ. ಇದರಿಂದ ನೀರು ಕಲುಷಿತಗೊಳ್ಳುವುದಿಲ್ಲ. ಇಲ್ಲವಾದರೆ ಕಲುಷಿತಗೊಂಡ ನೀರಿನಿಂದ ಟೈಫಾಯಿಡ್ ಕಾಯಿಲೆ ಕಾಡಬಹುದು.
ಪ್ರತಿದಿನ ಮಡಿಕೆಯಲ್ಲಿರುವ ನೀರನ್ನು ಖಾಲಿ ಮಾಡಿ ಸ್ವಚ್ಛಗೊಳಿಸಿ ಹೊಸ ನೀರನ್ನು ತುಂಬಿಸಿ ಕುಡಿಯಿರಿ. ಹಲವು ದಿನಗಳವರೆಗೆ ಉಳಿದ ನೀರನ್ನು ಕುಡಿಯಬೇಡಿ. ಇದರಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹವಾಗುತ್ತದೆ.
ಮಡಿಕೆ ಸುತ್ತ ಬಟ್ಟೆಗಳನ್ನು ಕಟ್ಟಿದ್ದರೆ ಅದನ್ನು ಪ್ರತಿದಿನ ಬದಲಾಯಿಸಿ ಸ್ವಚ್ಛವಾದ ಬಟ್ಟೆಯನ್ನು ಬಳಸಿ. ಇಲ್ಲವಾದರೆ ಬಟ್ಟೆಯಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರ ಸಂಗ್ರಹವಾಗಿ ಸೋಂಕು ಉಂಟಾಗಬಹುದು.
ಮಡಿಕೆಯಲ್ಲಿ ನೀರನ್ನು ಸಂಗ್ರಹಿಸಿದ ಮೇಲೆ ಮಡಿಕೆಯನ್ನು ಮುಚ್ಚಿಡಿ. ಹಾಗೇ ಚಿತ್ರ ಬಿಡಿಸಿದ ಮಡಿಕೆಗಳನ್ನು ಬಳಸಬೇಡಿ. ಇದರಲ್ಲಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ನೀರಿನಲ್ಲಿ ಮಿಕ್ಸ್ ಆದರೆ ಆರೋಗ್ಯಕ್ಕೆ ಹಾನಿಕಾರಕ.