ಯಾವುದೇ ಕಾರ್ಯಕ್ರಮವಿರಲಿ ವ್ಯಾಕ್ಸಿಂಗ್ ಗಾಗಿ ಪ್ರತಿಯೊಬ್ಬರೂ ಬ್ಯೂಟಿಪಾರ್ಲರ್ ಕದ ತಟ್ಟಿಯೇ ತಟ್ಟುತ್ತಾರೆ. ಆ ಬಳಿಕ ಚರ್ಮದಲ್ಲಿ ಮೂಡುವ ದದ್ದುಗಳ ಬಗ್ಗೆ ತಲೆ ಕೆಡಿಸಿಕೊಂಡೂ ಇರುತ್ತಾರೆ. ಅದನ್ನು ತಡೆಯಲು ಸರಳ ಸುಲಭ ಉಪಾಯಗಳು ಇಲ್ಲಿವೆ.
ವ್ಯಾಕ್ಸಿಂಗ್ ಗಿಂತ ಮೊದಲೇ ಡೆಡ್ ಸ್ಕಿನ್ ಕೋಶವನ್ನು ತೆಗೆಯಲು ಮೃದುವಾದ ಸ್ಕ್ರಬ್ಬಿಂಗ್ ಬಳಸಿ ತ್ವಚೆಯನ್ನು ಮೃದುವಾಗಿ ಉಜ್ಜಿ. ವ್ಯಾಕ್ಸಿಂಗ್ ನ ಎರಡು ದಿನ ಮೊದಲು ಹೀಗೆ ಮಾಡುವುದರಿಂದ ವ್ಯಾಕ್ಸಿಂಗ್ ಬಳಿಕ ಬರುವ ತುರಿಕೆಯನ್ನು ಕಡಿಮೆ ಮಾಡಬಹುದು.
ಪಾರ್ಲರ್ ವಾತಾವರಣ ಹೇಗಿದೆ ಎಂಬುದನ್ನು ಮೊದಲೇ ಪರಿಶೀಲಿಸಿ. ಒಮ್ಮೆ ಭೇಟಿ ನೀಡಿದ್ದಾಗ ಹೆಚ್ಚು ತುರಿಕೆ, ದದ್ದುಗಳು ಮೂಡಿದ್ದರೆ ಮತ್ತೊಮ್ಮೆ ಹೋಗುವ ಮುನ್ನ ಆಲೋಚಿಸಿ.
ವ್ಯಾಕ್ಸಿಂಗ್ ಮಾಡಿದ ತಕ್ಷಣ ಬಿಸಿಲಿಗೆ ಹೋಗದಿರಿ. ಬಿಸಿ ನೀರಿನಲ್ಲಿ ಸ್ನಾನ ಮಾಡದಿರಿ. ತ್ಚಚೆಯ ಆರೈಕೆಯತ್ತ ಹೆಚ್ಚಿನ ಗಮನ ಕೊಡಿ.