ಕೋವಿಡ್ ಸೋಂಕಿನ ವಿರುದ್ಧ ಸಹಜವಾಗಿ ಬೆಳೆದ ರೋಗನಿರೋಧಕ ಶಕ್ತಿಯು ಅಲ್ಪಾವಧಿಯದ್ದಾಗಿದ್ದು, ಕೋವಿಡ್-19 ಲಸಿಕೆ ಪಡೆಯದ ಮಂದಿಯಲ್ಲಿ ಸೋಂಕು ಮತ್ತೆ ತಗುಲುವ ಸಾಧ್ಯತೆ ಇದೆ ಎಂದು ’ದಿ ಲ್ಯಾನ್ಸೆಟ್ ಮೈಕ್ರೋಬ್’ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸಿದೆ.
“ಸಾರ್ಸ್-ಕೋವ್-2 ಸೋಂಕಿನ ವಿರುದ್ಧ ಸ್ವಾಭಾವಿಕವಾಗಿ ಬೆಳೆದ ರೋಗ ನಿರೋಧಕ ಶಕ್ತಿ ಮೂರು ತಿಂಗಳು ಅಥವಾ ಕಡಿಮೆ ಅವಧಿಯಲ್ಲಿ ತಗ್ಗುವ ಪರಿಣಾಮ ಮರು-ಸೋಂಕು ತಗುಲುವ ಸಾಧ್ಯತೆ ಇದೆ” ಎಂದು ಯೇಲ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಪ್ರಾಂಶುಪಾಲ ಜೆಫ್ರಿ ಟೌನ್ಸೆಂಡ್ ತಿಳಿಸಿದ್ದಾರೆ.
ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿದೆ 4000 ಹುದ್ದೆ
“ಸ್ವಾಭಾವಿಕವಾಗಿ ಸೋಂಕಿಗೆ ಒಳಗಾದ ಮಂದಿ ಲಸಿಕೆ ಪಡೆಯಬೇಕು. ಹಿಂದಿನ ಬಾರಿ ಸೋಂಕು ಬಂದಾಗ ಉತ್ಪತ್ತಿಯಾಗುವ ರೋಗ ನಿರೋಧಕ ಶಕ್ತಿಯು ಬಹಳ ಕಡಿಮೆ ಅವಧಿಗೆ ಸೋಂಕಿನ ವಿರುದ್ಧ ರಕ್ಷಣೆ ನೀಡುತ್ತದೆ” ಎಂದು ಟೌನ್ಸೆಂಡ್ ತಿಳಿಸಿದ್ದಾರೆ.
ಬರೋಬ್ಬರಿ 31 ವರ್ಷಗಳಿಂದ ಕೇವಲ ಚಹಾ ಸೇವಿಸಿ ಬದುಕಿದ್ದಾಳೆ ಈ ಮಹಿಳೆ..!
ಸಾರ್ಸ್ ಕೋವ್-2ನ ಸಂಬಂಧಿ ಸೊಂಕುಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದ ತಂಡ ಮರು-ಸೋಂಕು ಹಾಗೂ ರೋಗ ನಿರೋಧಕ ದತ್ತಾಂಶದ ಬಗ್ಗೆ ವಿಶ್ಲೇಷಣೆ ನಡೆಸಿದ್ದು, ಕೋವಿಡ್-19 ಸೋಂಕು ತಗುಲುವ ರಿಸ್ಕ್‌ನ ಮಟ್ಟಗಳ ಬಗ್ಗೆ ಕಾಲಕಾಲಿಕವಾದ ಅಂದಾಜು ಮಾಡಿದೆ.