alex Certify ‘ಉದ್ಯೋಗ’ ದ ಹುಡುಕಾಟದಲ್ಲಿರುವವರು ಈ ತಪ್ಪುಗಳನ್ನು ಮಾಡಲೇಬೇಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಉದ್ಯೋಗ’ ದ ಹುಡುಕಾಟದಲ್ಲಿರುವವರು ಈ ತಪ್ಪುಗಳನ್ನು ಮಾಡಲೇಬೇಡಿ…!

ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ ಉದ್ಯೋಗ ದಕ್ಕಿಸಿಕೊಳ್ಳೋದು ಈಗ ಸವಾಲಿನ ಕೆಲಸ. ಹೊಸ ಉದ್ಯೋಗದ ಹುಡುಕಾಟದಲ್ಲಿರುವವರು ಸಂದರ್ಶನದಲ್ಲಿ ಬಹಳ ಜಾಗರೂಕತೆಯಿಂದ ವರ್ತಿಸಬೇಕು. ವಿಷಯಕ್ಕೆ ಸಂಬಂಧಿಸಿದ ತಯಾರಿಯ ಜೊತೆಗೆ ಸಂದರ್ಶನವನ್ನು ಸುಲಭವಾಗಿ ಭೇದಿಸಲು ಅನೇಕ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

ಸಂದರ್ಶನದ ಸಂದರ್ಭದಲ್ಲಿ ನೀವು ಈ ಹಿಂದೆ ಕೆಲಸ ಮಾಡಿದ ಸಂಸ್ಥೆ ಅಥವಾ ಸಹೋದ್ಯೋಗಿಗಳನ್ನು ಟೀಕಿಸಬಾರದು. ಈ ರೀತಿ ಮಾಡಿದರೆ ಅದು ನಮ್ಮ ನಕಾರಾತ್ಮಕತೆಯನ್ನು ತೋರಿಸುತ್ತದೆ. ಸಂದರ್ಶನದ ಸಮಯದಲ್ಲಿ ಪಾಸಿಟಿವ್‌ ಆಗಿಯೇ ವರ್ತಿಸಬೇಕು. ಸಂದರ್ಶನದ ವೇಳೆ ನಕಾರಾತ್ಮಕತೆಯಿಂದ ದೂರವಿರಬೇಕು. ಮಾಡಲು ಸಾಧ್ಯವಾಗದ ಕೆಲಸಗಳ ಬಗ್ಗೆ ಗಮನಹರಿಸಬಾರದು. ಕಂಪನಿಗೆ ತಾನು ಹೇಗೆ ಉಪಯುಕ್ತವೆಂದು ಸಾಬೀತುಪಡಿಸಬಹುದು ಎಂಬುದನ್ನು ತೋರಿಸಬೇಕು.

ಯಾವುದೇ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ, ಪ್ರಶ್ನೆಯನ್ನು ಕೇಳಿದ ತಕ್ಷಣ ಅದಕ್ಕೆ ಉತ್ತರ ತಿಳಿದಿಲ್ಲ ಎಂದು ಹೇಳಬೇಡಿ. ಉತ್ತರ ಹೇಳಲು ಪ್ರಯತ್ನಿಸಲು ಅಥವಾ ಯೋಚಿಸಲು ಸ್ವಲ್ಪ ಸಮಯವನ್ನು ಕೇಳಬಹುದು. ಇದು ಒಳ್ಳೆಯ ಕೆಲಸಕ್ಕೆ ಪ್ರಯತ್ನಿಸುವ ನಿಮ್ಮ ಇಮೇಜ್ ಅನ್ನು ಬಿಂಬಿಸುತ್ತದೆ.

ರೆಸ್ಯೂಮ್‌ನಲ್ಲಿ ಬರೆದಿರುವ ಮಾಹಿತಿಯ ಬಗ್ಗೆ ಸಂದರ್ಶಕರು ಕೇಳಿದರೆ ಅದೆಲ್ಲಾ ರೆಸ್ಯೂಮ್‌ನಲ್ಲಿದೆ ಎಂದು ಬೇಜವಾಬ್ಧಾರಿಯ ಉತ್ತರ ನೀಡಬೇಡಿ. ಈ ಮಾಹಿತಿಯನ್ನು ನಿಮ್ಮದೇ ಮಾತುಗಳಲ್ಲಿ ಹೇಳಿ. ಇದು ಸಂದರ್ಶಕರನ್ನು ಇಂಪ್ರೆಸ್‌ ಮಾಡಬಹುದು.

ಸಂದರ್ಶನದ ನಂತರ ಸಂದರ್ಶಕರು ನಿಮಗೆ ಯಾವುದಾದರೂ ಸವಾಲುಗಳಿವೆಯೇ ಎಂದು ಕೇಳಿದರೆ ಇಲ್ಲ ಎಂದು ಹೇಳಬೇಡಿ. ಸಂದರ್ಶನದ ಮೊದಲು ಸರಿಯಾಗಿ ತಯಾರಿ ಮಾಡಿಕೊಳ್ಳಿ. ನಿಮ್ಮ ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ. ಕೇಳಲು ಅವಕಾಶವಿದ್ದರೆ ಪ್ರಶ್ನೆಗಳನ್ನು ಆದ್ಯತೆಯ ಆಧಾರದ ಮೇಲೆ ಕೇಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...