ಹಾಸನ : ಸಣ್ಣ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿಯಪ್ಪ, ಬಿಪಿಎಲ್ ಕಾರ್ಡ್ ಹೊಂದಿರುವವರು ಕೆಲವರು ಸಣ್ಣ ಕಾರು ಇಟ್ಟುಕೊಂಡಿರುತ್ತಾರೆ. ಸಣ್ಣ ಕಾರು ಇಟ್ಟುಕೊಂಡ ಕುಟುಂಬದ ಬಿಪಿಎಲ್ ಕಾರ್ಡ್ ರದ್ದುಗೊಳಿಸಬೇಕೇ, ಬೇಡವೇ ಎಂಬ ಕುರಿತುಉ ಚರ್ಚೆ ನಡೆಯುತ್ತಿದೆಯಷ್ಟೇ, ಸದ್ಯಕ್ಕೆ ಕಾರು ಇಲ್ಲದವರ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲ್ಲ ಎಂದು ಹೇಳಿದ್ದಾರೆ.
ಕಾರು ಇದ್ದರೂ ಅರ್ಹತೆ ಹೊಂದಿದವರಿಗೆ ಬಿಪಿಎಲ್ ಕಾರ್ಡ್ ನೀಡುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಯಾರು ಬಿಪಿಎಲ್ ಕಾರ್ಡ್ ಅಡಿಯಲ್ಲಿ ಬರುತ್ತಾರೆ ಎಂಬುದನ್ನು ನೋಡಿಕೊಂಡು ಅವರಿಗೆ ಸೂಕ್ತ ಕಾರ್ಡ್ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.