ಕೆಲವರಲ್ಲಿ ಸೈನಸ್ ಸಮಸ್ಯೆ ಕಂಡು ಬರುತ್ತದೆ. ಇದರಿಂದ ಉಸಿರಾಟದ ತೊಂದರೆ ಶುರುವಾಗುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ಮಾಡದಿದ್ದರೆ ಇದು ಗಂಭೀರವಾಗಿ ಪರಿಣಮಿಸಬಹುದು. ಹಾಗಾಗಿ ಸೈನಸ್ ನಿಂದ ಬಳಲುತ್ತಿರುವವರು ಈ ಟಿಫ್ಸ್ ಫಾಲೋ ಮಾಡಿ.
*ಸೈನಸ್ ಇರುವವರು ಶುದ್ಧ ಗಾಳಿಯನ್ನು ಉಸಿರಾಡಬೇಕು. ಧೂಳಿನಿಂದ ಇದು ಮತ್ತಷ್ಟು ಹೆಚ್ಚಾಗುತ್ತದೆ. ಹಾಗಾಗಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ.
*ಅನಾರೋಗ್ಯಕ್ಕೊಳಗಾದ ಜನರಿಂದ ದೂರವಿರಿ. ಅವರ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿ ಮತ್ತು ಆಗಾಗ ಕೈಗಳನ್ನು ತೊಳೆಯುತ್ತೀರಿ.
*ದೇಹವನ್ನು ಹೈಡ್ರೀಕರಿಸಿ. ಅದಕ್ಕಾಗಿ ಪ್ರತಿದಿನ ಸಾಕಷ್ಟು ನೀರನ್ನು ಕುಡಿಯಿರಿ. ಗಂಟಲು ಒಣಗದಂತೆ ನೋಡಿಕೊಳ್ಳಿ. ಆಲ್ಕೋಹಾಲ್, ಕೆಫಿನ್ ಅನ್ನು ಸೇವಿಸಬೇಡಿ.
*ಚೆನ್ನಾಗಿ ನಿದ್ರೆ ಮಾಡಿ. 8 ಗಂಟೆಗಳ ಕಾಲ ನಿದ್ರಿಸಿ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.
*ಧೂಮಪಾನವನ್ನು ಮಾಡಬೇಡಿ, ದಟ್ಟವಾದ ಹೊಗೆ, ಮಾಲಿನ್ಯ, ಸುಗಂಧ ಪರಿಮಳಗಳಿಂದ ದೂರವಿರಿ. ಇಲ್ಲವಾದರೆ ಈ ಸಮಸ್ಯೆ ಹೆಚ್ಚಾಗುತ್ತದೆ.