ತೂಕವನ್ನು ನೈಸರ್ಗಿಕವಾಗಿ ಕಡಿಮೆ ಮಾಡಿಕೊಳ್ಳಲು ಬಯಸಿದ್ದರೆ ತೆಂಗಿನ ಎಣ್ಣೆ ಅತ್ಯುತ್ತಮವೆಂದು ಸಾಭೀತಾಗಿದೆ.ತೂಕ ಇಳಿಸಿಕೊಳ್ಳಲು ಮಾರುಕಟ್ಟೆಗೆ ಸಾಕಷ್ಟು ವಸ್ತುಗಳು, ಮಾತ್ರೆಗಳು ಬಂದಿವೆ. ಆದ್ರೆ ತೆಂಗಿನ ಎಣ್ಣೆ ಯಾವುದೇ ಅಡ್ಡ ಪರಿಣಾಮವಿಲ್ಲದೆ ತೂಕ ಇಳಿಸಲು ನೆರವಾಗುತ್ತದೆ.
ಚರ್ಮ, ಕೂದಲ ಸೌಂದರ್ಯಕ್ಕೆ ಮಾತ್ರವಲ್ಲ ತೆಂಗಿನ ಎಣ್ಣೆಯನ್ನು ಆಹಾರದಲ್ಲಿ ಬಳಸಬಹುದು. ಆಹಾರದಲ್ಲಿ ತೆಂಗಿನ ಎಣ್ಣೆ ಬಳಸಿದ್ರೆ ಅದು ಹೊಟ್ಟೆ ಬೊಜ್ಜು ಕರಗಿಸಲು ನೆರವಾಗುತ್ತದೆ. ತೆಂಗಿನ ಎಣ್ಣೆಯಲ್ಲಿ ಕಂಡುಬರುವ ಅಂಶಗಳನ್ನು ಸುಲಭವಾಗಿ ತೂಕ ಇಳಿಸಲು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ತೆಂಗಿನ ಎಣ್ಣೆ ದೇಹದ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ.
ಅಡುಗೆ ಎಣ್ಣೆ ಬದಲು ತೆಂಗಿನ ಎಣ್ಣೆಯನ್ನು ಅಡುಗೆಗೆ ಬಳಸಿದ್ರೆ ಒಳ್ಳೆಯದು. ಇದು ಕೊಬ್ಬು ಕರಗಲು ನೆರವಾಗುತ್ತದೆ. ಹೊಟ್ಟೆ ಬೊಜ್ಜು ಎನ್ನುವವರು ಕೆಲವೊಮ್ಮೆ ಏನೆ ಕಸರತ್ತು ಮಾಡಿದ್ರೂ ಪ್ರಯೋಜನವಾಗುವುದಿಲ್ಲ. ಅಂಥವರು ತೆಂಗಿನ ಎಣ್ಣೆಯಲ್ಲಿ ಅಡುಗೆ ತಯಾರಿಸಿ ಸೇವನೆ ಮಾಡಬಹುದು. ಹಾಗೆ ತೆಂಗಿನ ಎಣ್ಣೆಯನ್ನು ಹೊಟ್ಟೆ ಸೇರಿದಂತೆ ಬೊಜ್ಜಿರುವ ಜಾಗಕ್ಕೆ ಮಸಾಜ್ ಮಾಡಬಹುದು. ಇದು ತೂಕ ಕಡಿಮೆ ಮಾಡುವುದಿಲ್ಲ. ಬದಲಿಗೆ ಮಸಾಜ್ ನೋವುಗಳನ್ನು ಕಡಿಮೆ ಮಾಡುತ್ತದೆ.