ಬೆಂಗಳೂರು : ಕಾಶಿಯಾತ್ರೆಗೆ ಹೋಗುವವರಿಗೆ ಮುಜರಾಯಿ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಕಾಶಿಯಾತ್ರೆಯ 8 ನೇ ಸುತ್ತಿನ ಪ್ರವಾಸ ಅಕ್ಟೋಬರ್ 26 ರಿಂದ ಪ್ರಾರಂಭವಾಗಲಿದ್ದು, ಆಸಕ್ತರು ಸ್ಕ್ಯಾನ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ರಾಜ್ಯ ಮುಜರಾಯಿ ಇಲಾಖೆಯಿಂದ ‘ಕರ್ನಾಟಕ – ಭಾರತ್ ಗೌರವ್ ಕಾಶಿ ರೈಲು ಯಾತ್ರೆ’ಯ 6ನೇ ಸುತ್ತಿನ ಪ್ರವಾಸ ಶನಿವಾರದಿಂದ ಶುರುವಾಗಿದ್ದು, ನಗರದ ಯಶವಂತಪುರ ರೈಲು ನಿಲ್ದಾಣದಿಂದ ಕಾಶಿಗೆ ತೆರಳಿದ ರೈಲಿನ ಎಲ್ಲ 650 ಆಸನಗಳು ಭರ್ತಿಯಾಗಿದ್ದವು.
ಅ.7ರಂದು 7ನೇ ಸುತ್ತಿನ ಯಾತ್ರೆ ಆರಂಭವಾಗಲಿದ್ದು, ಈಗಾಗಲೇ ಎಲ್ಲ ಆಸನಗಳ ಟಿಕೆಟ್ ಬುಕ್ಕಿಂಗ್ ಪೂರ್ಣಗೊಂಡಿವೆ. ಆಸಕ್ತರು ಅ.26ಕ್ಕೆ ಆರಂಭವಾಗಲಿರುವ ಪ್ರವಾಸಕ್ಕೆ ಟಿಕೆಟ್ ಕಾಯ್ದಿರಿಸಬಹುದು.