alex Certify SHOCKING: ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಪೈಕಿ 21-30 ರ ವಯೋಮಾನದವರೇ ಅತಿ ಹೆಚ್ಚು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಪೈಕಿ 21-30 ರ ವಯೋಮಾನದವರೇ ಅತಿ ಹೆಚ್ಚು

ಬೆಂಗಳೂರಿನಲ್ಲಿ ಕಳೆದ ವರ್ಷ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಪೈಕಿ 21-30 ವರ್ಷದ ನಡುವಿನ ಮಂದಿಯೇ ಹೆಚ್ಚಾಗಿದ್ದಾರೆ. ಅತ್ಯಂತ ಗಂಭೀರವಾಗಿ ಗಾಯಗೊಂಡವರ ಪೈಕಿಯೂ ಇದೇ ವಯೋಮಾನದವರೇ ಹೆಚ್ಚಾಗಿದ್ದಾರೆ.

2021ರಲ್ಲಿ ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟ 468 ಮಂದಿಯ ಪೈಕಿ 207 ಮಂದಿ 21-30 ವರ್ಷದ ನಡುವಿನವರು. ಇದೇ ವೇಳೆ ಇಂಥ ಪ್ರಕರಣಗಳ ಪೈಕಿ 245ರಲ್ಲಿ ಇದೇ ವಯೋಮಾನದವರು ಆಪಾದಿತರಾಗಿದ್ದಾರೆ ಎಂದು ಬೆಂಗಳೂರು ಸಂಚಾರ ಪೊಲೀಸ್‌ ಬಿಡುಗಡೆ ಮಾಡಿದ ಅಪಘಾತ ವಿಶ್ಲೇಷಣೆಯಿಂದ ತಿಳಿದು ಬಂದಿದೆ.

ಬಂಜಾರ ಸಮುದಾಯದ ಶ್ರೀ ಸಂತ ಸೇವಾಲಾಲರ ಜಯಂತಿ ರದ್ದು

ಇದೇ ವೇಳೆ, ಆಪಾದಿತರ ಪೈಕಿ ಶೈಕ್ಷಣಿಕ ಅರ್ಹತೆಯನ್ನೂ ಸಹ ವಿಶ್ಲೇಷಣಾ ವರದಿ ಕೊಡಮಾಡಿದ್ದು, ಇವರ ಪೈಕಿ ಚಾರ್ಜ್‌ಶೀಟ್‌ಗಳಲ್ಲಿ ಹೆಚ್ಚಾಗಿ ಕಂಡು ಬಂದವರು (225 ಮಂದಿ) ಪ್ರೌಢಶಾಲೆಯ ಹಂತ ದಾಟಿಲ್ಲ. ಮಿಕ್ಕಂತೆ, ಪಿಯುಸಿ, ಡಿಗ್ರಿ ಹಾಗೂ ಇಂಜಿನಿಯರಿಂಗ್ ಪದವಿ ಪಡೆದ ಮಂದಿಯೂ ಆಪಾದಿತರ ಪಟ್ಟಿಯಲ್ಲಿದ್ದಾರೆ.

ಇದೇ ಅವಧಿಯಲ್ಲಿ, ವಾರಾಂತ್ಯಗಳಲ್ಲೂ ಸಹ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ಸಂಭವಿಸಿದ್ದು, ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣಗಳೂ ಜಾಸ್ತಿ ಇವೆ. ಮಾರಣಾಂತಿಕ ಅಪಘಾತಗಳಲ್ಲಿ 107 ಶನಿವಾರ ಹಾಗೂ 101 ಭಾನುವಾರದ ದಿನಗಳಲ್ಲಿ ಘಟಿಸಿವೆ. 105 ಅಪಘಾತಗಳು ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿ ವೇಳೆ ಸಂಭವಿಸಿವೆ.

ಕೋವಿಡ್-19 ಕಾರಣದಿಂದ ಪಾನಮತ್ತರಾಗಿ ವಾಹನ ಚಾಲನೆ ಮಾಡುವವರನ್ನು ಪರೀಕ್ಷೆ ಮಾಡುವುದನ್ನು ನಿಲ್ಲಿಸಿದ ಕಾರಣ ಕುಡಿದು ವಾಹನ ಚಾಲನೆ ಮಾಡುವವರನ್ನು ಕೇಳುವವರೇ ಇಲ್ಲವಾಗಿದ್ದು, ಇವರ ದಾಂಧಲೆ ಜೋರಾಗಿದೆ ಎಂದು ಸಂಚಾರಿ ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ.

2021ರಲ್ಲಿ ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ 618 ಪ್ರಕರಣಗಳ ಪೈಕಿ 655 ಮಂದಿ ಮೃತಪಟ್ಟಿದ್ದಾರೆ. ಹಿಂದಿನ ವರ್ಷಗಳಂತೆಯೇ, ದ್ವಿಚಕ್ರ ವಾಹನ ಸವಾರರೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ 161 ಪಾದಚಾರಿಗಳೂ ಸಹ ಮೃತಪಟ್ಟಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...