alex Certify ಕೇವಲ ನೀರು ಕುಡಿದು 21 ದಿನಗಳಲ್ಲಿ 13 ಕೆಜಿ ತೂಕ ಇಳಿಸಿದ್ದಾನೆ ಈ ಯುವಕ, ಇಂತಹ ಉಪವಾಸ ಸುರಕ್ಷಿತವೇ ? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ ನೀರು ಕುಡಿದು 21 ದಿನಗಳಲ್ಲಿ 13 ಕೆಜಿ ತೂಕ ಇಳಿಸಿದ್ದಾನೆ ಈ ಯುವಕ, ಇಂತಹ ಉಪವಾಸ ಸುರಕ್ಷಿತವೇ ? ಇಲ್ಲಿದೆ ಮಾಹಿತಿ

ಕೋಸ್ಟರಿಕಾದ ನಿವಾಸಿ ಆಡಿಸ್ ಮಿಲ್ಲರ್ ಎಂಬಾತ ತನ್ನ ತೂಕ ನಷ್ಟದ ರಹಸ್ಯದಿಂದಾಗಿ ವೈರಲ್ ಆಗುತ್ತಿದ್ದಾನೆ. ಈತ ಕೇವಲ 21 ದಿನಗಳಲ್ಲಿ ನೀರು ಕುಡಿದು 13 ಕೆಜಿ ತೂಕ ಇಳಿಸಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನು ನೀರಿನ ಉಪವಾಸ ಎಂದೂ ಕರೆಯುತ್ತಾರೆ, ಇದು ತ್ವರಿತ ತೂಕ ನಷ್ಟಕ್ಕೆ ಬಹಳ ಸಹಾಯಕವಾಗಿದೆ. ಆದರೆ ತೂಕ ನಷ್ಟದ ಈ ವಿಧಾನ ಎಷ್ಟು ಸುರಕ್ಷಿತ ಎಂಬುದನ್ನು ನೋಡೋಣ.

ವಾಟರ್‌ ಫಾಸ್ಟಿಂಗ್‌ ಎಂದರೆ ಕೇವಲ ನೀರನ್ನು ಕುಡಿದು ಬದುಕುವುದು. 24 ಗಂಟೆಗಳಿಂದ ಹಲವಾರು ವಾರಗಳವರೆಗೆ ಈ ರೀತಿ ಇರಬಹುದು. ಅಡಿಸ್ ಮಿಲ್ಲರ್ 21 ದಿನಗಳ ಕಾಲ ವಾಟರ್‌ ಫಾಸ್ಟಿಂಗ್‌ ಮಾಡಿದ್ದಾನಂತೆ. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ತರುತ್ತದೆ ಎಂದು ಹೇಳಲಾಗ್ತಿದೆ. ಅಷ್ಟೇ ಅಲ್ಲ ಕೆಲವು ಅಧ್ಯಯನಗಳ ಪ್ರಕಾರ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ.

ವಾಟರ್‌ ಫಾಸ್ಟಿಂಗ್‌ ಸುರಕ್ಷಿತವೇ ?

ತಜ್ಞರ ಪ್ರಕಾರ ವೈದ್ಯಕೀಯ ಸಲಹೆಯಿಲ್ಲದೆ ವಾಟರ್‌ ಫಾಸ್ಟಿಂಗ್‌ ಮಾಡುವುದು ಅಪಾಯಕಾರಿ. ಈ ಸಮಯದಲ್ಲಿ ದೇಹವು ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತದೆ. ಇದು ದೌರ್ಬಲ್ಯ, ಆಯಾಸ, ತಲೆನೋವು ಮತ್ತು ಹೊಟ್ಟೆ ಅಸಮಾಧಾನದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ದೀರ್ಘಾವಧಿಯ ನೀರಿನ ಉಪವಾಸ ಮತ್ತು ಆಗಾಗ್ಗೆ ನೀರಿನ ಉಪವಾಸ ಮಾಡುವುದರಿಂದ ಸ್ನಾಯುಗಳ ನಷ್ಟ, ಮೂಳೆಗಳ ದುರ್ಬಲತೆ, ಹೃದಯ ಸಮಸ್ಯೆಗಳು ಮತ್ತು ಸಾವಿಗೆ ಕಾರಣವಾಗಬಹುದು. ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಮಧುಮೇಹ ರೋಗಿಗಳು ಮತ್ತು ಕಡಿಮೆ ತೂಕ ಹೊಂದಿರುವವರು ವಾಟರ್‌ ಫಾಸ್ಟಿಂಗ್‌ ಮಾಡಬಾರದು.

ತೂಕ ಇಳಿಸಿಕೊಳ್ಳಲು ಬಯಸಿದರೆ ವೈದ್ಯರು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸಿ. ಅವರು ಸಮತೋಲಿತ ಆಹಾರವನ್ನು ಪ್ಲಾನ್‌ ಮಾಡಿಕೊಡುತ್ತಾರೆ. ಅದು ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ನಿಯಮಿತ ವ್ಯಾಯಾಮ ಕೂಡ ತೂಕ ನಷ್ಟಕ್ಕೆ  ಸಹಾಯ ಮಾಡುತ್ತದೆ.

ವಾಟರ್‌ ಫಾಸ್ಟಿಂಗ್‌ ಮೂಲಕ ಬಹುಬೇಗ ತೂಕ ಕಳೆದುಕೊಳ್ಳಬಹುದು. ಆದರೆ ಇದು ಅಪಾಯಕಾರಿ. ಎಲ್ಲರಿಗೂ ಸುರಕ್ಷಿತವಲ್ಲ ಮತ್ತು ಇದರಿಂದ ಅನೇಕ ರೀತಿಯ ಸಮಸ್ಯೆಗಳಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...