ಫಿಟ್ ಆದ ದೇಹ ಮತ್ತು ಸುಂದರ ತ್ವಚೆಯನ್ನು ಹೊಂದುವ ಆಸೆ ಎಲ್ಲರಿಗೂ ಇರುತ್ತದೆ. ಇದಕ್ಕೆ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕು, ಜೊತೆಗೆ ಈ ಯೋಗಗಳನ್ನು ಪ್ರತಿದಿನ ಅಭ್ಯಾಸ ಮಾಡಬೇಕು. ಈ ಯೋಗಗಳು ನಿಮ್ಮ ಚರ್ಮದ ಆರೋಗ್ಯ ಹೆಚ್ಚಿಸಿ ಉತ್ತಮವಾದ ಮೈಕಾಂತಿಯನ್ನು ನೀಡುತ್ತದೆ.
*ಸರ್ವಾಂಗಾಸನ : ನಿಮ್ಮ ಬೆನ್ನಿನ ಮೇಲೆ ಮಲಗಿ ನಿಮ್ಮ ದೇಹವನ್ನು ನೆಲದಿಂದ ಮೇಲಕೆತ್ತಿ ನಿಮ್ಮ ದೇಹವನ್ನು ನಿಮ್ಮ ಹೆಗಲ ಮೇಲೆ ಇಡೀ ದೇಹವನ್ನು ನಿಲ್ಲಿಸಿ. ನಿಮ್ಮ ಬೆನ್ನನ್ನು ಬೆಂಬಲಿಸಲು ನಿಮ್ಮ ಕೈಗಳನ್ನು ಬಳಸಿ ಆಳವಾಗಿ ಉಸಿರಾಡಿ 30 ಸೆಕೆಂಡುಗಳ ಕಾಲ ಹಾಗೇ ಇರಿ. ಇದು ರಕ್ತದ ಹರಿವನ್ನು ನಿಯಂತ್ರಿಸುವ ಮೂಲಕ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ ಮೊಡವೆ, ಕಲೆಗಳು, ಸುಕ್ಕುಗಳನ್ನು ನಿವಾರಿಸುತ್ತದೆ.
*ಹಲಾಸನ : ನಿಮ್ಮ ಬೆನ್ನಿನ ಮೇಲೆ ಮಲಗಿ ನಿಧಾನವಾಗಿ ನಿಮ್ಮ ಕಾಲುಗಳನ್ನು ನೆಲದಿಂದ ಮೇಲಕ್ಕೆತ್ತಿ ಮತ್ತು ಕಾಲುಗಳು ನೆಲ ಮುಟ್ಟುವಂತೆ ನಿಮ್ಮ ತಲೆಯ ಹಿಂದೆ ಇಳಿಸಿ. ಈ ಭಂಗಿಯಲ್ಲಿ 15 ಸೆಕೆಂಡುಗಳ ಕಾಲ ಇರಿಸಿ. ಇದು ಜೀರ್ಣಾಂಗ ವ್ಯವಸ್ಥೆ ಮತ್ತು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮವನ್ನು ಸುಂದರವಾಗಿಸಿ ಹೊಳೆಯುವಂತೆ ಮಾಡುತ್ತದೆ.
*ಮತ್ಸ್ಯಾಸನ : ನೆಲದ ಮೇಲೆ ಮಲಗಿ ನಿಮ್ಮ ಕೈಗಳನ್ನು ನಿಮ್ಮ ಸೊಟಂದ ಕೆಳಗೆ ಇರಿಸಿ, ನಿಮ್ಮ ತಲೆ ಮತ್ತು ಸೊಂಟದ ನಡುವೆ ಕಮಾನಿನ ರೀತಿ ಮಾಡಿ ನಿಮ್ಮ ದೇಹವನ್ನು ಮೇಲಕ್ಕೆತ್ತಿ. ಇದನ್ನು 1 ನಿಮಿಷ ಮಾಡಿ. ಇದು ನಿಮ್ಮ ಹಾರ್ಮೋನ್ ಗ್ರಂಥಿಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುವುದರ ಮೂಲಕ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.