ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಅದಕ್ಕೆ ಸರಿಯಾದ ಚಿಕಿತ್ಸೆ ನೀಡಿ. ಇಲ್ಲವಾದರೆ ಇದರಿಂದ ಬೊಕ್ಕ ತಲೆಯ ಸಮಸ್ಯೆ ಕಾಡುತ್ತದೆ. ಹಾಗಾಗಿ ನಿಮ್ಮ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ ಬಲಯಂ ಯೋಗವನ್ನು ಮಾಡಿ. ಅದನ್ನು ಮಾಡುವ ವಿಧಾನ ಇಲ್ಲಿದೆ.
ಬಲಯಂ ಯೋಗವು ಕೂದಲು ಉದುರುವಿಕೆಯನ್ನು ನಿಲ್ಲಿಸಲು ಮತ್ತು ಬೋಳು ತಲೆಯ ಸಮಸ್ಯೆಯನ್ನು ತಪ್ಪಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಈ ಯೋಗ ಮಾಡಲು ಮೊದಲಿಗೆ ಸೊಂಟವನ್ನು ನೇರವಾಗಿ ಇರಿಸಿ ನಂತರ ಎರಡೂ ಕೈಗಳನ್ನೂ ಎದೆಯ ಮುಂದೆ ಇರಿಸಿ. ಈಗ ನೀವು 2 ಕೈಗಳ ಬೆರಳುಗಳ ಉಗುರುಗಳನ್ನು ಒಟ್ಟಿಗೆ ಉಜ್ಜಬೇಕು. ನಮ್ಮ ಉಗುರುಗಳ ಅಡಿಯಲ್ಲಿ ಕೆಲವು ನರಗಳ ತುದಿಗಳಿವೆ. ಇದು ತಲೆಯ ಚರ್ಮದ ಮೇಲೆ ಒತ್ತಡವನ್ನು ಹೆಚ್ಚಿಸಿ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಕೂದಲು ಬೆಳವಣಿಗೆ ಹೊಂದುತ್ತದೆ.
ಈ ಯೋಗ ಮಾಡುವುದರಿಂದ 3 ತಿಂಗಳಿನ ನಂತರ ಕೂದಲು ತ್ವರಿತವಾಗಿ ಬೆಳವಣಿಗೆ ಹೊಂದುತ್ತದೆ. ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದಿಲ್ಲ, ತಲೆಹೊಟ್ಟು ಮತ್ತು ಒಣ ನೆತ್ತಿಯ ಸಮಸ್ಯೆ ದೂರವಾಗುತ್ತದೆ. ಆದರೆ ಈ ಯೋಗವನ್ನು ಅಧಿಕ ರಕ್ತದೊತ್ತಡ ರೋಗಿಗಳು ಮತ್ತು ಗರ್ಭಿಣಿಯರು ಮಾಡಬಾರದು. ಹಾಗೇ ಎರಡೂ ಹೆಬ್ಬೆರಳುಗಳ ಉಗುರುಗಳನ್ನು ಒಟ್ಟಿಗೆ ಉಜ್ಜಬೇಡಿ. ಇದು ಮುಖದ ಮೇಲೆ ಕೂದಲು ಬೆಳೆಯಲು ಕಾರಣವಾಗುತ್ತದೆ.