ಈ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮ ಜನವರಿ 30ರಂದು ನಡೆಯಲಿದೆ. ಜನವರಿ 30 ರಂದು ಬೆಳಿಗ್ಗೆ 11:30 ಕ್ಕೆ, ಮಾಸಿಕ ರೇಡಿಯೊ ಕಾರ್ಯಕ್ರಮ `ಮನ್ ಕಿ ಬಾತ್ ನ 85 ನೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಂದಿನಂತೆ, ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಗಾಂಧೀಜಿಯವರ ಪುಣ್ಯ ತಿಥಿಯಂದು ಈ ತಿಂಗಳ ಆವೃತ್ತಿ ನಡೆಯಲಿದ್ದು, ಅವರ ಸ್ಮರಣೆಯನ್ನು ಆಚರಿಸಿದ ನಂತರ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂದು ಪ್ರಧಾನ ಮಂತ್ರಿ ಕಚೇರಿ (PMO) ತಿಳಿಸಿದೆ.
“ಮನ್ ಕಿ ಬಾತ್”, ಪ್ರಧಾನ ಮಂತ್ರಿಗಳ ಮಾಸಿಕ ರೇಡಿಯೋ ಭಾಷಣವಾಗಿದೆ. ಇದನ್ನು ಪ್ರತಿ ತಿಂಗಳ ಕೊನೆಯ ಭಾನುವಾರದಂದು ಪ್ರಸಾರ ಮಾಡಲಾಗುತ್ತದೆ. ಕಾರ್ಯಕ್ರಮವನ್ನು ಆಲ್ ಇಂಡಿಯಾ ರೇಡಿಯೋ AIR, ದೂರದರ್ಶನದ ಸಂಪೂರ್ಣ ನೆಟ್ವರ್ಕ್ ಮತ್ತು AIR ನ್ಯೂಸ್ ಮತ್ತು ಮೊಬೈಲ್ ಅಪ್ಲಿಕೇಶನ್ನಲ್ಲಿ ಪ್ರಸಾರ ಮಾಡಲಾಗುತ್ತದೆ.
ಸ್ಯಾಮ್ಸಂಗ್ ಮೊಬೈಲ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ʼಗುಡ್ ನ್ಯೂಸ್ʼ
ಜನವರಿ 19 ರಂದು ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ ನ ಈ ಆವೃತ್ತಿಗೆ ನಿಮ್ಮ ಆಲೋಚನೆ, ಅಭಿಪ್ರಾಯ ಹಾಗೂ ಸಲಹೆಗಳನ್ನ ಹಂಚಿಕೊಳ್ಳಿ ಎಂದು ನಾಗರಿಕರಿಗೆ ಕರೆ ನೀಡಿದ್ದರು. ಈ ಕಾರ್ಯಕ್ರಮದ ಮೊದಲ ಎಪಿಸೋಡ್, 2014 ಅಕ್ಟೋಬರ್ 3ನೇ ತಾರೀಖಿನಂದು ಪ್ರಸಾರವಾಗಿತ್ತು. ಡಿಸೆಂಬರ್ 26ರಂದು 2021ರ ಕೊನೆಯ ಮನ್ ಕಿ ಬಾತ್ ಎಪಿಸೋಡ್ ಪ್ರಸಾರವಾಗಿತ್ತು.