ಹೈದರಾಬಾದ್: ಅತ್ಯಂತ ಜನಪ್ರಿಯವಾಗಿರುವ 21 ಕೆ.ಜಿ ತೂಕದ ಬಾಲಾಪುರ ಗಣೇಶ್ ಲಡ್ಡುವನ್ನು ಭಾನುವಾರ 18.90 ಲಕ್ಷ ರೂಪಾಯಿಗಳಿಗೆ ಹರಾಜು ಮಾಡಲಾಯಿತು.
ಅಬಾಕಸ್ ಎಜುಕೇಶನ್ ಲಿಮಿಟೆಡ್ ಸಿಒಒ ಶಶಾಂಕ್ ರೆಡ್ಡಿ ಮತ್ತು ವೈಎಸ್ಆರ್ ಕಾಂಗ್ರೆಸ್ ಎಂಎಲ್ಸಿ ಆರ್ವಿ ರಮೇಶ್ ಯಾದವ್ ಅವರು 21 ಕೆ.ಜಿ ತೂಕದ ಚಿನ್ನ ಲೇಪಿತ ಲಡ್ಡುವನ್ನು ಯಶಸ್ವಿಯಾಗಿ ಬಿಡ್ ಮಾಡಿದರು. 1116 ರೂ.ಗಳಿಂದ ಬಿಡ್ಡಿಂಗ್ ಆರಂಭವಾಯಿತು.
ಹರಾಜಿನಲ್ಲಿ ತೆಲಂಗಾಣ ಶಿಕ್ಷಣ ಸಚಿವ ಪಿ. ಸಬಿತಾ ಇಂದ್ರ ರೆಡ್ಡಿ ಮತ್ತು ಮಾಜಿ ಶಾಸಕ ಟಿ. ಕೃಷ್ಣ ರೆಡ್ಡಿ ಸೇರಿದಂತೆ ಹಲವಾರು ರಾಜಕಾರಣಿಗಳು ಹಾಜರಿದ್ದರು.
ಕಳೆದ ಬಾರಿ ಅಂದರೆ 2020 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ನಿರ್ಬಂಧಗಳಿಂದಾಗಿ, ಬಾಲಾಪುರ ಗಣೇಶ ಉತ್ಸವ ಸಮಿತಿಯು ಲಡ್ಡನ್ನು ಹರಾಜಿಗಿಟ್ಟಿರಲಿಲ್ಲ. ಬದಲಾಗಿ, ಅದನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು.
BIG NEWS: ಬಿಜೆಪಿಯಲ್ಲಿ ಶಮನವಾಗದ ಅಸಮಾಧಾನ; ಕಾರ್ಯಕಾರಿಣಿಯಿಂದ ಅಂತರ ಕಾಯ್ದುಕೊಂಡ ನಾಯಕರು; ಜಾರಕಿಹೊಳಿ ಬ್ರದರ್ಸ್ ಕೂಡ ಗೈರು
ಇನ್ನು 2019ರಲ್ಲಿ ಬಾಲಾಪುರ ನಿವಾಸಿ ಕೋಲಾನ್ ರಾಮ್ ರೆಡ್ಡಿ ಎಂಬುವವರು 17.60 ಲಕ್ಷ ರೂ.ಗಳಿಗೆ ಹರಾಜನ್ನು ಗೆದ್ದಿದ್ದರು. ಉದ್ಯಮಿ ಹಾಗೂ ಕೃಷಿಕರಾಗಿರುವ ರೆಡ್ಡಿಯು ಈ ವರ್ಷವೂ ಹರಾಜಿನಲ್ಲಿ ಭಾಗವಹಿಸಿದರು.
ಪ್ರತಿ ವರ್ಷ ಹರಾಜನ್ನು ಆಯೋಜಿಸುವ ಬಾಲಾಪುರ ಗಣೇಶ ಉತ್ಸವ ಸಮಿತಿಯ ಪ್ರಕಾರ, 1994 ರಲ್ಲಿ ಮೊದಲ ಹರಾಜು ನಡೆಯಿತು. ಆಗ ಲಡ್ಡು 450 ರೂ.ಗೆ ಮಾರಾಟವಾಗಿತ್ತು ಎಂದು ಹೇಳಿದೆ.
ಮೊದಲ ಹರಾಜನ್ನು ಕೋಲನ್ ಮೋಹನ್ ರೆಡ್ಡಿ ಗೆದ್ದಿದ್ದರು. ಬಿಡ್ ಗೆದ್ದ ನಂತರ ಇವರ ಮನೆಯಲ್ಲಿ ಸಮೃದ್ಧಿ ಹೆಚ್ಚಾಯಿತಂತೆ. ಹಾಗಾಗಿ ಅಂದಿನಿಂದ ಲಡ್ಡು ಹರಾಜು ಪ್ರಕ್ರಿಯೆ ಜನಪ್ರಿಯಗೊಂಡಿತು.