ದಿನದ ದಣಿವು, ಸುಸ್ತು ಹಾಸಿಗೆ ಮೇಲೆ ಮಲಗಿದ ಮೇಲೆ ಮಾಯವಾಗುತ್ತದೆ. ರಾತ್ರಿ ಹಾಸಿಗೆ ಸೇರಿದ್ರೆ ಸಾಕು ಎನ್ನುವವರಿದ್ದಾರೆ. ಬಹುತೇಕರು ರಾತ್ರಿ ಮಲಗುವ ವೇಳೆ ಹಾಸಿಗೆ ಬಳಿ ಅನೇಕ ವಸ್ತುಗಳನ್ನಿಟ್ಟು ಮಲಗ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳು ರಾತ್ರಿ ಮಲಗುವ ವೇಳೆ ನಮ್ಮಿಂದ ದೂರವಿರುವುದು ಒಳಿತು.
ವಾಸ್ತು ಶಾಸ್ತ್ರದ ಪ್ರಕಾರ ರಾತ್ರಿ ತಲೆ ಬಳಿ ಪರ್ಸ್ ಇಟ್ಟು ಮಲಗಬಾರದು. ಹೀಗೆ ಮಾಡಿದಲ್ಲಿ ವ್ಯಕ್ತಿ ಪ್ರತಿ ಕ್ಷಣ ಹಣಕ್ಕೆ ಸಂಬಂಧಿಸಿದ ಚಿಂತೆಯಲ್ಲಿ ಮುಳುಗುವಂತಾಗುತ್ತೆ.
ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತಲೆ ಬಳಿಯಿಟ್ಟು ಮಲಗಬಾರದು. ಇದು ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ.
ತಲೆದಿಂಬಿನ ಬಳಿ ಭಯ ಹುಟ್ಟಿಸುವಂತಹ ಫೋಟೋಗಳನ್ನಿಟ್ಟು ಮಲಗಬೇಡಿ. ಇದು ಒತ್ತಡಕ್ಕೆ ಕಾರಣವಾಗುತ್ತದೆ. ಹಾಗೆ ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ.
ಪುಸ್ತಕ ಅಥವಾ ಯಾವುದೆ ಪತ್ರಿಕೆಯನ್ನು ದಿಂಬಿನ ಕೆಳಗಿಟ್ಟು ಮಲಗಬಾರದು. ಇದು ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತದೆ.
ಶೂ, ಚಪ್ಪಲಿಗಳನ್ನು ಹಾಸಿಗೆ ಬಳಿ ಇಡಬಾರದು. ಇದು ವ್ಯಕ್ತಿಯ ಆರೋಗ್ಯ ಹಾಗೂ ಆರ್ಥಿಕತೆ ಮೇಲೆ ಪ್ರಭಾವ ಬೀರುತ್ತದೆ. ಇದ್ರ ಜೊತೆಗೆ ಕೆಟ್ಟ ಸ್ವಪ್ನ ಬೀಳಲು ಕಾರಣವಾಗುತ್ತದೆ.