ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಹೋಳಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಈ ಬಾರಿ ಮಾರ್ಚ್ 25 ರಂದು ಆಚರಿಸಲಾಗುತ್ತಿದೆ. ಅದೃಷ್ಟ ಬದಲಿಸುವ ಶಕ್ತಿ ಹೋಳಿಗಿದೆ. ದೀಪಾವಳಿಯಂದು ಮಾತ್ರವಲ್ಲ ಹೋಳಿಯಲ್ಲೂ ಸಂಪತ್ತು ಮತ್ತು ಸಂತೋಷ, ಸಮೃದ್ಧಿ ನೀಡುವ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ.
ಹೋಳಿಯಲ್ಲಿ ಮಾಡುವ ಕೆಲಸದಿಂದ ಅದೃಷ್ಟ ಬದಲಾಗುತ್ತದೆ. ಶ್ರೀಮಂತರಾಗಲು ಬಯಸಿದ್ರೆ ಹಳದಿ ಸಾಸಿವೆಯನ್ನು ಬಳಸಬೇಕು. ಹೋಳಿ ದಹನದ ವೇಳೆ ಹಳದಿ ಸಾಸಿವೆಯನ್ನು ದಹನಕ್ಕೆ ಹಾಕಬೇಕು.ಇದ್ರಿಂದ ನಿಮ್ಮ ಆಸೆ ಪೂರ್ತಿಯಾಗಲಿದೆ. ಹೋಳಿಯಲ್ಲಿ ತಾಯಿ ಲಕ್ಷ್ಮಿಯನ್ನು ಆರಾಧನೆ ಮಾಡಬೇಕು. ಹೋಳಿ ದಹನದ ವೇಳೆ ಹಳದಿ ಸಾಸಿವೆಯನ್ನು ಹಾಕುವುದ್ರಿಂದ ವರ್ಷಪೂರ್ತಿ ಸಂತೋಷ ಮನೆ ಮಾಡಿರುತ್ತದೆ.
ರೋಗ, ಭಯ ದೂರವಾಗುತ್ತದೆ. ಹಳದಿ ಸಾಸಿವೆ ಹಾಕುವ ವೇಳೆ ರಾಕ್ಷೋಘ್ನ ಮಂತ್ರವನ್ನು 108 ಬಾರಿ ಜಪಿಸಬೇಕು. ಆಗ ಫಲ ಬೇಗ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ.