alex Certify ಜೀವನದ ಮೇಲೆ ಪ್ರಭಾವ ಬೀರುತ್ತೆ ರಾತ್ರಿ ಮಾಡುವ ಈ ‘ಕೆಲಸ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನದ ಮೇಲೆ ಪ್ರಭಾವ ಬೀರುತ್ತೆ ರಾತ್ರಿ ಮಾಡುವ ಈ ‘ಕೆಲಸ’

ಗ್ರಂಥದಲ್ಲಿ ಪ್ರತಿಯೊಂದು ಕೆಲಸಕ್ಕೂ ಒಂದು ಸರಿಯಾದ ಸಮಯವನ್ನು ನಿಗದಿಪಡಿಸಲಾಗಿದೆ. ಆ ಸಮಯದಲ್ಲಿ ಮಾಡಿದ ಕೆಲಸ ಉತ್ತಮ ಫಲಿತಾಂಶ ನೀಡುತ್ತದೆ ಎಂಬ ನಂಬಿಕೆಯಿದೆ. ಹಾಗೆ ಸಮಯವಲ್ಲದ ಸಮಯದಲ್ಲಿ ನಾವು ಮಾಡುವ ಕೆಲಸ ನಮ್ಮ ಏಳ್ಗೆ ಮೇಲೆ ಪರಿಣಾಮ ಬೀರುತ್ತದೆ. ಗ್ರಂಥದ ಪ್ರಕಾರ ರಾತ್ರಿ ಕೆಲವೊಂದು ಕೆಲಸಗಳನ್ನು ಮಾಡಬಾರದು. ಇದು ಜೀವನದ ಮೇಲೆ ಪ್ರಭಾವ ಬೀರುತ್ತದೆ.

ನಾವು ತೆಗೆದುಕೊಳ್ಳುವ ನಿರ್ಣಯ ನಮ್ಮ ಭವಿಷ್ಯವನ್ನು ರೂಪಿಸುತ್ತದೆ. ಸಾಮಾನ್ಯವಾಗಿ ರಾತ್ರಿ ಊಟದ ವೇಳೆ ಅಥವಾ ಊಟವಾದ ನಂತ್ರ ಕುಟುಂಬಸ್ಥರೆಲ್ಲ ಸೇರಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಆದ್ರೆ ಗ್ರಂಥ ಇದಕ್ಕೆ ಸಮ್ಮತಿ ನೀಡುವುದಿಲ್ಲ.

ಸೂರ್ಯಾಸ್ತನ ನಂತ್ರ ನಿರ್ಣಯ ತೆಗೆದುಕೊಳ್ಳುವುದು ಒಳಿತಲ್ಲ. ಸಂಶೋಧನೆಯೊಂದು ಇದಕ್ಕೆ ಪುಷ್ಠಿ ನೀಡಿದೆ. ರಾತ್ರಿ ನಾವು ತೆಗೆದುಕೊಳ್ಳುವ ಬಹುತೇಕ ನಿರ್ಣಯಗಳು ತಪ್ಪಾಗಿರುತ್ತದೆಯಂತೆ. ಬೆಳಗಿನ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಣಯ ಹೆಚ್ಚು ಫಲ ನೀಡುತ್ತದೆ ಎಂದು ಸಂಶೋಧನೆ ಹೇಳಿದೆ.

ರಾತ್ರಿ ಸಮಯದಲ್ಲಿ ವ್ಯಕ್ತಿ ದಣಿದಿರುತ್ತಾನೆ. ಇಡೀ ದಿನದ ಒತ್ತಡ ಆತನ ಮೇಲಿರುತ್ತದೆ. ಬೆಳಿಗ್ಗೆ ಮನಸ್ಸು ಉಲ್ಲಾಸಗೊಂಡಿರುತ್ತದೆ. ಮನಸ್ಸು ಚುರುಕಾಗಿರುತ್ತದೆ. ರಾತ್ರಿ ಬಹುತೇಕ ವಿಷ್ಯಗಳು ತಪ್ಪಾಗಿ ಕಾಣಿಸುತ್ತವೆ. ಆದ್ರೆ ಬೆಳಿಗ್ಗೆ ಎಲ್ಲವೂ ಸುಂದರವಾಗಿ ಕಾಣುವುದ್ರಿಂದ ಸರಿಯಾದ ನಿರ್ಣಯ ತೆಗೆದುಕೊಳ್ಳುವುದು ಸುಲಭ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...