ನಾವು ಸಾಮಾನ್ಯವಾಗಿ ನಿರ್ಲಕ್ಷಿಸುವ ಸಣ್ಣ ಚಟಗಳು ಕೆಲವೊಮ್ಮೆ ಅಪಾಯಕ್ಕೆ ಕಾರಣವಾಗಬಹುದು. ತಲೆಗೂದಲು ತಿರುಗಿಸುವುದು, ತುಟಿ ಕಚ್ಚುವುದು ಅಥವಾ ಉಗುರು ಕಚ್ಚುವುದು ಇಂತಹ ಚಟಗಳಲ್ಲಿ ಸೇರಿವೆ. ಸಿಡ್ನಿಯ ಯುವತಿ ಗೇಬಿ ಅಮೊಯಿಲ್ಸ್ಗೆ ಉಗುರು ಕಚ್ಚುವ ಚಟವಿತ್ತು. ಇದು ಆಕೆಯನ್ನು ಆಸ್ಪತ್ರೆ ಸೇರುವಂತೆ ಮಾಡಿದೆ.
ಗೇಬಿ ಅಮೊಯಿಲ್ಸ್, 23 ವರ್ಷದ ಯುವತಿ, ಯಾವಾಗಲೂ ಉಗುರು ಕಚ್ಚುವ ಅಭ್ಯಾಸ ಹೊಂದಿದ್ದಳು. ಇದು ಆರಂಭದಲ್ಲಿ ಆಕೆಗೆ ಯಾವುದೇ ತೊಂದರೆ ಉಂಟುಮಾಡಿರಲಿಲ್ಲ. ಆದರೆ ಈ ವರ್ಷ, ಒಂದು ನಿರ್ದಿಷ್ಟ ಉಗುರನ್ನು ಕಚ್ಚಿದ ನಂತರ, ಆಕೆಗೆ ಏನೋ ಸರಿ ಇಲ್ಲ ಎಂದು ಅನಿಸಿತು. ಎರಡು ದಿನಗಳಲ್ಲಿ, ಆಕೆಯ ಬೆರಳು “ತುಂಬಾ ನೋವಿನಿಂದ ಕೂಡಿದೆ” ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
“ನಾನು ಮತ್ತು ನನ್ನ ಸ್ನೇಹಿತರು ಟ್ವಿಸ್ಟರ್ ಆಡುತ್ತಿದ್ದೆವು ಮತ್ತು ನನ್ನ ಕೈಯನ್ನು ಇಡಲು ಸಹ ಸಾಧ್ಯವಾಗಲಿಲ್ಲ. ಅದು ತುಂಬಾ ನೋವಿನಿಂದ ಕೂಡಿತ್ತು” ಎಂದು ಆಕೆ ನೆನಪಿಸಿಕೊಂಡಿದ್ದಾಳೆ.
ಮೊದಲಿಗೆ, ವೈದ್ಯರ ಬಳಿಗೆ ಹೋಗುವುದಿಲ್ಲ ಎಂದು ಅವಳು ಭಾವಿಸಿ ಕುದಿಸಿದ ಉಪ್ಪು ನೀರಿನಲ್ಲಿ ಬೆರಳನ್ನು ನೆನೆಸಿ ನೋಡಿದ್ದಾಳೆ, ಆದರೆ ಸೋಂಕು ಗುಣವಾಗುವ ಬದಲು ಉಲ್ಬಣಗೊಂಡಿದೆ. ಐದನೇ ದಿನ, ನೋವು ಹೊಸ ಮಟ್ಟವನ್ನು ತಲುಪಿದಾಗ ವೈದ್ಯಕೀಯ ಸಹಾಯ ಪಡೆಯದೆ ಬೇರೆ ದಾರಿಯಿರಲಿಲ್ಲ.
ದುರದೃಷ್ಟವಶಾತ್, ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು ವಾರಾಂತ್ಯದಲ್ಲಿ, ಅದು ಗಾತ್ರದಲ್ಲಿ ದ್ವಿಗುಣವಾಗಿದೆ. ಸೋಂಕು ವ್ಯಾಪಕವಾಗಿದ್ದು, ಗುಳ್ಳೆ ಸಹ ಆಗಿದೆ.
ಆಸ್ಪತ್ರೆಯಲ್ಲಿ, ವೈದ್ಯರು ಅವಳ ಬೆರಳನ್ನು 15 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿ ಮೃದುಗೊಳಿಸಿ ನಂತರ ಒಡೆಯಲು ಪ್ರಯತ್ನಿಸಿ ಅಂತಿಮವಾಗಿ ಎರಡು ಮಿಲಿಮೀಟರ್ಗಳಷ್ಟು ಕೀವು ಹೊರಬಂದಿದೆ.
ಇದು ಕೇವಲ ಒಂದು ವೈಯಕ್ತಿಕ ಅನುಭವ ಎಂದು ಭಾವಿಸಿ, ಆಕೆ ತನ್ನ ಕಷ್ಟವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಕೇವಲ ತನ್ನ ಸ್ನೇಹಿತರು ಮಾತ್ರ ನೋಡುತ್ತಾರೆ ಎಂದು ಭಾವಿಸಿದ್ದಳು. ಬದಲಿಗೆ, ವೀಡಿಯೊವು 3.8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.