ಏಪ್ರಿಲ್ ಒಂದರಂದು ಮೂರ್ಖರ ದಿನವಾಗಿ ಆಚರಿಸಲಾಗುತ್ತದೆ. ಅಂದು ಸಹಜವಾಗಿ ಎಲ್ಲರೂ ಒಬ್ಬರಿಗೊಬ್ಬರು ಫೂಲ್ ಮಾಡಿ ತಮಾಷೆ ಮಾಡಿಕೊಳ್ಳುವುದು ಸಾಮಾನ್ಯ.
ಈ ಅವಕಾಶ ಬಳಸಿಕೊಂಡು ಮಹಿಳೆಯೊಬ್ಬರು ತನ್ನ ಸಹೋದ್ಯೋಗಿಗಳಿಗೆ ಮಾಡಿರುವ ಪ್ರಾಂಕ್‌ನ ವಿಡಿಯೋ ವೈರಲ್ ಆಗಿದೆ. ಆಕೆ ಚೀಸ್ ಕ್ಯೂಬ್‌ಗಳು, ತರಕಾರಿಗಳು ಮತ್ತು ಆಲಿವ್‌ನೊಂದಿಗೆ ಡೊನಟ್ಸ್‌ನ ಬಾಕ್ಸ್‌ಗೆ ತುಂಬಿದಳು, ಆ ಪ್ಯಾಕೇಜ್‌ನಲ್ಲಿ ಏಪ್ರಿಲ್ ಫೂಲ್ಸ್ ಅನ್ನು ಸಹ ಬರೆದಿದ್ದಳು.
ಬೆಚ್ಚಿಬೀಳಿಸುವಂತಿದೆ ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿ ಬಳಸಿದ ತಂತ್ರ….!
ನಂತರ ಆಕೆ ತನ್ನ ಕಚೇರಿಯ ಕಿಚನ್‌ನಲ್ಲಿ ಬಾಕ್ಸ್ ಇಟ್ಟು ತನ್ನ ಸಹೋದ್ಯೋಗಿಗಳ ಪ್ರತಿಕ್ರಿಯೆಗಳನ್ನು ದಾಖಲಿಸಲು ಕ್ಯಾಮೆರಾವನ್ನು ಹಾಕಿದ್ದಾಳೆ. ಒಬ್ಬ ಸಹೋದ್ಯೋಗಿ ರುಚಿಕರವಾದ ಡೋನಟ್‌ಗಳನ್ನು ನಿರೀಕ್ಷಿಸುತ್ತಾ ಪೆಟ್ಟಿಗೆಯನ್ನು ತೆರೆದಾಗ ಫೂಲ್ ಆಗಿದ್ದು ಅನುಭವವಾಗಿ ಶೀಘ್ರದಲ್ಲೇ ನಿರಾಶೆಗೊಂಡರು. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.