ಆ ಮಹಿಳೆಯ ಹೆಸರು ಎಲಿಸಬೆತ್ ಆಂಡರ್ಸನ್-ಸಿಯೆರಾ. ಆಕೆಗೆ ಹೈಪರ್ ಲ್ಯಾಕ್ಟೇಶನ್ ಸಿಂಡ್ರೋಮ್ ಎಂಬ ಸಮಸ್ಯೆಯಿದೆ. ಇದರಿಂದ ಹೆಚ್ಚಿನ ಪ್ರಮಾಣದ ಹಾಲಿನ ಉತ್ಪಾದನೆಯಿಂದಾಗಿ ಎದೆ ಹಾಲು ಉಕ್ಕಿ ಹರಿಯುತ್ತದೆ. ಹೀಗಾಗಿ ಈಕೆ ಎರಡು ಮಕ್ಕಳ ತಾಯಿಯಾದರೂ ಸಾವಿರಾರು ಮಕ್ಕಳನ್ನು ಪೋಷಿಸಿದ್ದಾರೆ.
ಅವಧಿ ಪೂರ್ವ ಜನಿಸಿದ ಶಿಶುಗಳಿಗೆ ಎದೆಹಾಲು ನೀಡುವ ಮೂಲಕ ಜೀವಗಳನ್ನು ಉಳಿಸಲು ಸಹಾಯ ಮಾಡಿದ್ದಾರೆ. ಒಟ್ಟು 1,599.68 ಲೀಟರ್‌ನಷ್ಟು ಅತಿ ಹೆಚ್ಚು ಎದೆಹಾಲು ನೀಡಿ ವಿಶ್ವ ದಾಖಲೆಯನ್ನು ಮಾಡಿದ್ದಾರೆ.
ಯುಎಸ್ಎ ನ ಒರೆಗಾನ್‌ನಲ್ಲಿ ಈ ಮಹಿಳೆ 2015ರ ಫೆಬ್ರವರಿ 20 ಮತ್ತು 2018ರ ಜೂನ್ 20ರ ನಡುವೆ ಹಾಲಿನ ಬ್ಯಾಂಕ್‌ಗೆ ದೇಣಿಗೆಯನ್ನು ನೀಡಿದ್ದಾರೆ. ವರ್ಲ್ಡ್ ರೆಕಾರ್ಡ್ಸ್ ಈ ಬಗೆಗಿನ ವೀಡಿಯೊವನ್ನು ಇನ್ಸ್ಟಾಗ್ರಾಂ ನಲ್ಲಿ ಶುಕ್ರವಾರ ಪೋಸ್ಟ್ ಮಾಡಿದೆ. ಮತ್ತು ಇದು 1.6 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಆಗಿದೆ.
ಕಳೆದ ಒಂಬತ್ತು ವರ್ಷಗಳಲ್ಲಿ ನಾನು ಹಾಲು ದಾನ ನೀಡಿದ ಒಟ್ಟು ಸಂಖ್ಯೆ ಅಂದಾಜು 3,50,000 ಔನ್ಸ್‌ಗಳಿಗಿಂತ ಹೆಚ್ಚು ಎಂದು ಮಹಿಳೆ ಹೇಳಿಕೊಂಡಿದ್ದಾರೆ. ನನ್ನ ಶತ್ರುವಿಗೂ ಈ ಸ್ಥಿತಿಯನ್ನು ನಾನು ಬಯಸುವುದಿಲ್ಲ ಎಂದಿರುವ ಮಹಿಳೆ ಇದು ಹಾಸ್ಯವಲ್ಲ ಅಂದಿದ್ದಾರೆ.
ಆದ್ರೆ ನನ್ನ ಹಾಲಿನಿಂದ ಎಷ್ಟು ಶಿಶುಗಳು ಪ್ರಯೋಜನ ಪಡೆದಿವೆ ಎಂದು ತಿಳಿಯುವುದು ಅಸಾಧ್ಯ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ. ಇನ್ನು ಎದೆ ಹಾಲು ತುಂಬಿದ ಬಾಟಲಿಗಳನ್ನು ತೋರಿಸುತ್ತಾ ಮಾತನಾಡಿರುವ ಅವರು ಪ್ರತಿ ಐದು ನಿಮಿಷಗಳಿಗೊಮ್ಮೆ ನನ್ನಲ್ಲಿ ಹಾಲು ಉತ್ಪಾದನೆಯಾಗುತ್ತಿತ್ತು ಎಂದು ಹೇಳಿದ್ದಾರೆ.
ಕಳೆದ ಒಂಬತ್ತು ವರ್ಷಗಳಲ್ಲಿ ಈ ಮಹಿಳೆ ಸ್ಥಳೀಯ ಕುಟುಂಬಗಳಿಗೆ ಮತ್ತು ವಿಶ್ವಾದ್ಯಂತ ಎದೆಹಾಲು ಸ್ವೀಕರಿಸುವವರಿಗೆ ದೇಣಿಗೆ ನೀಡಿದ್ದಾರೆ. ಆಕೆಗೆ ಹೈಪರ್‌ಲ್ಯಾಕ್ಟೇಶನ್ ಸಿಂಡ್ರೋಮ್ ಇದೆ. ಇದರಿಂದ ಹೆಚ್ಚಿನ ಹಾಲಿನ ಉತ್ಪಾದನೆಯಿಂದಾಗಿ ಎದೆ ಹಾಲು ಉಕ್ಕಿ ಹರಿಯುತ್ತದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್ ಹೇಳಿದೆ. ನನ್ನ ದೇಹವು ಪ್ರೊಲ್ಯಾಕ್ಟಿನ್ ಎಂಬ ಹಾರ್ಮೋನ್ ಅನ್ನು ಬಹಳಷ್ಟು ಸೃಷ್ಟಿಸುತ್ತದೆ ಮತ್ತು ಅದು ಹಾಲಿನ ಉತ್ಪಾದನೆಯನ್ನು ಪ್ರೇರೇಪಿಸುತ್ತದೆ ಎಂದು ಆ ಮಹಿಳೆ ಉಲ್ಲೇಖಿಸಿದ್ದಾರೆ.
ಇನ್ನು ಈ ದಾಖಲೆ ಅದ್ಭುತವಾಗಿದೆ. ಅನೇಕ ಅಮೂಲ್ಯ ಶಿಶುಗಳಿಗೆ ಎಂತಹ ಅದ್ಭುತ ಉಡುಗೊರೆಯನ್ನು ನೀಡಿದೆ ಎಂದು ನೆಟ್ಟಿಗರು ಸಹ ಕಾಮೆಂಟ್ ಮಾಡಿದ್ದಾರೆ.
ಈ ರೀತಿಯಲ್ಲಿಯೂ ಜಗತ್ತಿಗೆ ಸೇವೆ ಸಲ್ಲಿಸುವುದು ಎಂತಹ ಸೌಭಾಗ್ಯ ಇವರನ್ನು ಗೌರವಿಸಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇದರ ಜೊತೆ ಇನ್ನೊಂದು ಕಮೆಂಟ್ ಹಾಕಿರುವ ವ್ಯಕ್ತಿಯೊಬ್ಬರು ಅಯ್ಯೋ ಸ್ತನ್ಯಪಾನ ಮಾಡುವುದು ತುಂಬಾ ಕಷ್ಟ. ಅದರಲ್ಲೂ ಪಂಪ್ ಮಾಡುವುದು ಮತ್ತಷ್ಟು ಕಷ್ಟ. ಹಾಲನ್ನು ದಾನ ಮಾಡಿದಕ್ಕಾಗಿ ಮತ್ತು ಇತರ ಶಿಶುಗಳಿಗೆ ಇದರಿಂದ ಪ್ರಯೋಜನವಾಗುವಂತೆ ಮಾಡಿದಕ್ಕಾಗಿ ಧನ್ಯವಾದಗಳು ಎಂದು ಬರೆದಿದ್ದಾರೆ.