
ಕೆಲಸದ ಸಂದರ್ಶನವೊಂದರ ಸಮಯದಲ್ಲಿ ಅನುಮಾನ ಬಂದು ಆಕೆಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದಾಗ ಈ ಖತರ್ನಾಕ್ ವಂಚನೆಯ ಜಾಲ ಬೆಳಕಿಗೆ ಬಂದಿದೆ. ಬಂಧಿತ ಮಹಿಳೆಯನ್ನು ಗುವಾನ್ ಎಂದು ಹೆಸರಿಸಲಾಗಿದ್ದು ಈಕೆ ಕೆಲಸಕ್ಕೆ ಸಂಬಂಧಿಸಿದ ಗ್ರೂಪ್ ಚಾಟ್‌ಗಳಲ್ಲಿ ಹಂಚಿಕೊಳ್ಳುವ ಫೋಟೋಗಳನ್ನು ಬಳಸಿಕೊಂಡು ಕ್ಲೈಂಟ್ ಮೀಟಿಂಗ್ ಎಂದು ತನಗೆ ಉದ್ಯೋಗ ನೀಡಿದ ಕಂಪೆನಿಯನ್ನು ವಂಚಿಸುತ್ತಿದ್ದಳು.
ಗುವಾನ್ ತನ್ನ ಈ ಬಹುದೊಡ್ಡ ವಂಚನೆಯ ಜಾಲದಲ್ಲಿ ಸಿಲುಕಿಕೊಳ್ಳದಂತೆ ನೋಡಿಕೊಳ್ಳಲು ಉದ್ಯೋಗಕ್ಕೆ ಸೇರಿದ ದಿನಾಂಕ, ಜಾಬ್ ಡೇಸಿಗ್ನೇಶನ್ ಮತ್ತು ಬ್ಯಾಂಕ್ ಅಕೌಂಟ್ ಸೇರಿದಂತೆ ಅಗತ್ಯ ಮಾಹಿತಿಗಳ ವಿವರವಾದ ಡಾಕ್ಯುಮೆಂಟ್ ಸಹ ಇಟ್ಟುಕೊಂಡಿದ್ದಳು ಎಂದು ತನಿಖೆ ಸಂದರ್ಭ ಬಯಲಾಗಿದೆ. ಗುವಾನ್‌ಗೆ ಆಕೆಯ ಪತಿ ಚೆನ್ ಕಿಯಾಂಗ್ ಸಹ ಈ ದಂಧೆಗೆ ಸಾಥ್ ನೀಡಿದ್ದ ಎಂದು ತಿಳಿದುಬಂದಿದೆ. ಈ ದಂಪತಿಗಳು ಯಾವುದೇ ಉದ್ಯೋಗಾವಕಾಶಗಳನ್ನು ತಿರಸ್ಕರಿಸುತ್ತಿರಲಿಲ್ಲ. ಆದ್ರೆ ಜಾಬ್ ಆಫರ್ ಹೆಚ್ಚಾದಾಗ ಇತರರಿಗೆ ಈ ಉದ್ಯೋಗದ ಆಫರ್‌ನ್ನು ಮಾರಾಟ ಮಾಡುತ್ತಿದ್ದರು. ಇಷ್ಟು ಮಾತ್ರವಲ್ಲದೇ ಇದಕ್ಕಾಗಿ ಅವರು ಕಮಿಷನ್ ಸಹ ಪಡೆಯುತ್ತಿದ್ದರು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ನಿಯಮಗಳು ಮತ್ತು ಕಾನೂನುಗಳ ಬಗ್ಗೆಯು ಈ ದಂಪತಿ ಹೆಚ್ಚಾಗಿ ತಿಳಿದುಕೊಂಡಿದ್ದರು. 13 ಪ್ರಕರಣಗಳಲ್ಲಿ ತಾವು ಮಧ್ಯಸ್ಥಿಕೆ ವಹಿಸಿ ಆ ಪ್ರಕರಣಗಳನ್ನು ಬಗೆಹರಿಸಿದ್ದರು. ಈ ಮೂಲಕ ಆ ದಂಪತಿ ಎಷ್ಟೊಂದು ಚಾಕಚಕ್ಯತೆಯನ್ನು ಹೊಂದಿದ್ದರು ಎಂದು ತಿಳಿದುಬರುತ್ತದೆ.