ಅದೊಂದು ಕ್ರಿಶ್ಚಿಯನ್ ಮದುವೆ ಸಮಾರಂಭ…… ಆ ಮದುವೆ ಮನೆ ವಿಶೇಷ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ಆ ಸಮಾರಂಭದಲ್ಲಿ ಗೆಳೆಯರಿದ್ದರು, ಸಂಬಂಧಿಕರಿದ್ದರು ಅವರೆಲ್ಲರ ಮುಂದೆ ವೇದಿಕೆ ಮೇಲೆ ಮದುಮಗ ಸೂಟ್‌ಲ್ಲಿ ಮಿಂಚ್ತಾ ಇದ್ರೆ, ಮದುಮಗಳು ವೈಟ್ ಗೌನ್ ನಲ್ಲಿ ಸಿಂಡ್ರೆಲಾಳಂತೆ ಕಂಗೊಳಿಸ್ತಾ ಇದ್ದಳು.
ಈ ಜೋಡಿ ಇನ್ನೇನು ರಿಂಗ್ ಎಕ್ಸ್ ಚೇಂಜ್ ಮಾಡಿಕೊಂಡು ಒಬ್ಬರಿಗೊಬ್ಬರು ಜೀವನ ಸಂಗಾತಿ ಅಂತ ಪಾದ್ರಿಯ ಮುಂದೆ ಹೇಳಬೇಕಾಗಿತ್ತು ಆಗಲೇ ನೋಡಿ ಆಗಿತ್ತು ಒಂದು ಎಡವಟ್ಟು. ಮದುಮಗಳು ಒಮ್ಮಿಂದೊಮ್ಮೆ ಮದುವೆ ನಿಲ್ಲಿಸಿ ಅಂತ ಎಲ್ಲರ ಮುಂದೆಯೇ ಹೇಳಿ ಬಿಟ್ಟಳು.
ಆಶ್ಚರ್ಯ ಆದ್ರಿ ತಾನೆ..! ಇದೇ ಸತ್ಯ. ದೇವರನ್ನ ಸಾಕ್ಷಿಯಾಗಿಟ್ಟುಕೊಂಡು ಆ ಜೋಡಿ ಎಲ್ಲರ ಮುಂದೆ ಇನ್ನೇನು ತಮ್ಮನ್ನ ತಾವು ಜೀವನ ಸಂಗಾತಿ ಅಂತ ಒಪ್ಪಿಕೊಳ್ಳಬೇಕಾಗಿತ್ತು. ಆದರೆ ಆಕೆ ಆ ಕ್ಷಣದಲ್ಲಿ ಮದುವೆ ನಿಲ್ಲಿಸಿದ್ದು ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಆದರೆ ಕೊನೆಗೆ ಈ ಮದುವೆ ಯಾಕೆ ನಿಲ್ಲಿಸೋಕೆ ಹೇಳಿದ್ದು ಅಂತ, ಆಕೆಯೇ ಹೇಳಿದಳು.
ಅಸಲಿಗೆ ಮದುವೆ ಮನೆ ಬರೋ ಸಮಯದಲ್ಲಿ ಆತುರದಲ್ಲಿ, ಆಕೆ ತನ್ನ ವೈಟ್ ಗೌನ್ನ ಅರ್ಧ ಡ್ರೆಸ್ ಅಷ್ಟೆ ಹಾಕಿಕೊಂಡು ಬಂದಿದ್ದಾಳೆ. ಆಕೆಗೆ ಇನ್ನೇನು ರಿಂಗ್ ಎಕ್ಸಚೇಂಜ್ ಮಾಡುವ ಸಮಯದಲ್ಲಿ ತನ್ನ ಉಳಿದ ಅರ್ಧ ಡ್ರೆಸ್ ಇಲ್ಲ ಅನ್ನೋದು ಅರಿವಾಗಿದೆ. ಆ ತಕ್ಷಣವೇ ಮದುವೆಯನ್ನ ನಿಲ್ಲಿಸಿದ್ದಾಳೆ.
ಕೊನೆಗೆ ಆಕೆಯ ಗೆಳತಿಯರು ಉಳಿದ ಅರ್ಧ ಡ್ರೆಸ್ ನ್ನ ತಂದು ಮದುಮಗಳಿಗೆ ಡ್ರೆಸ್‌ಗೆ ಅಟ್ಯಾಚ್ ಮಾಡಿದ್ದಾರೆ. ಆ ನಂತರವೇ ಆಕೆಗೆ ಸಮಾಧಾನ ಆಗಿದ್ದು. ಆದರೆ ಹೀಗೆ ಒಮ್ಮಿಂದೊಮ್ಮೆ ಮದುವೆ ನಿಲ್ಲಿಸಿ ಅಂತ ಮದುಮಗಳು ಹೇಳಿದ್ದು ಕೇಳಿ ವರ ಗಾಬರಿ ಆಗಿದ್ದೇನೋ ನಿಜ.