ಅಂಬೆಗಾಲಿಡುತ್ತಿದ್ದ ವಯಸ್ಸಲ್ಲಿ ಮೂಗಿಗೆ ಹೊಕ್ಕಿದ್ದ ಮಣಿಯೊಂದನ್ನು 20 ವರ್ಷಗಳ ಬಳಿಕ ಹೊರತೆಗೆದ ಅಮೆರಿಕದ ಯುವತಿಯೊಬ್ಬರು ಸುದ್ದಿಯಲ್ಲಿದ್ದಾರೆ.
23 ವರ್ಷದ ಹನ್ನಾ ಹ್ಯಾಮಿಲ್ಟನ್ ಎಂಬ ಈ ಯುವತಿ ತಮ್ಮ ಈ ಅನುಭವವನ್ನು ಅಕ್ಟೋಬರ್ 14ರಂದು ಟಿಕ್‌ಟಾಕ್‌ನಲ್ಲಿ ಹೇಳಿಕೊಂಡಿದ್ದಾರೆ. ಈ ಕ್ಲಿಪ್‌ಗೆ 10 ದಶಲಕ್ಷಕ್ಕೂ ಹೆಚ್ಚಿನ ವೀವ್ಸ್ ಸಿಕ್ಕಿವೆ.
10 ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ನೇಮಕಾತಿ: ವಿಮೆ ಪ್ರತಿನಿಧಿಗಳ ನಿಯುಕ್ತಿಗೆ ಸಂದರ್ಶನ
“ನನಗೆ ಮೂರು ವರ್ಷ ವಯಸ್ಸಾಗಿದ್ದ ವೇಳೆ ನನ್ನ ಮೂಗಿನಲ್ಲಿ ಮಣಿ ಸೇರಿಕೊಂಡಿದ್ದು ನೆನಪಿದೆ. ಹಾಗೆ ಸೇರಿಕೊಂಡ ಬಳಿಕ ಅದು ಯಾಕೆ ಹೊರಗೆ ಬರುತ್ತಿರಲಿಲ್ಲ ಎಂದು ನನಗೆ ಗೊತ್ತಾಗುತ್ತಿರಲಿಲ್ಲ. ಆದರೆ ನಾನು ಯಾರಿಗೂ ಈ ವಿಚಾರ ತಿಳಿಸಲಿಲ್ಲ.. ಮತ್ತು ಅದನ್ನು ಮರೆತೇ ಬಿಟ್ಟಿದ್ದೆ. ಆದರೆ ನನಗೆ ಸೈನಸ್ ಸೋಂಕು ಉಂಟಾಗಿ, ಮೂಗಿನ ಬಲಭಾಗ ಸಂಪೂರ್ಣವಾಗಿ ಬ್ಲಾಕ್ ಆದಂತೆ ಭಾಸವಾಗಿದೆ. ಬರುಬರುತ್ತಾ ಇದು ನೋವಿನ ಅನುಭವವೂ ಆಗಿಬಿಟ್ಟಿದೆ. ಕಿವಿಯ ಗುಗ್ಗೆಯ ಕ್ಯಾಮೆರಾ ತೆಗೆದುಕೊಂಡು ಮೂಗಿನಲ್ಲಿ ಏನಿದೆ ಎಂದು ನೋಡಿದಾಗ ಬಾಲ್ಯದಿಂದಲೂ ನನ್ನ ಮೂಗಿನಲ್ಲಿ ಸೇರಿಕೊಂಡ ಮಣಿ ಕಂಡಿದೆ. ಅದು ಈಗ ತಾನೇ ಮೂಗಿನಿಂದ ಹೊರಬಂದಿದೆ” ಎಂದು ಟಿಕ್‌ಟಾಕ್ ವಿಡಿಯೋದಲ್ಲಿ ಈಕೆ ಹೇಳಿಕೊಂಡಿದ್ದಾಳೆ.