ಅದೃಷ್ಟ ಯಾವಾಗ ಯಾರಿಗೆ ಬೇಕಾದರೂ ಕೆಲವೇ ಕ್ಷಣಗಳಲ್ಲಿ ಖುಲಾಯಿಸಿಬಿಡಬಹುದು.
ಈ ಮಾತನ್ನು ಮತ್ತೊಮ್ಮೆ ಸಾಬೀತುಪಡಿಸುವ ಘಟನೆಯೊಂದರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ನೊರೀನ್ ರೆಡ್‌ಬರ್ಗ್ ಎಂಬಾಕೆ ತನ್ನ ಪತಿಯೊಂದಿಗೆ ಅರ್ಕಾನ್ಸಾಸ್‌ನ ದಿ ಕ್ರೇಟರ್ ಆಫ್ ಡೈಮಂಡ್ ಸ್ಟೇಟ್ ಉದ್ಯಾನದಲ್ಲಿ ಅಡ್ಡಾಡುವ ವೇಳೆ ಅಕಸ್ಮಾತ್ ಆಗಿ ಕಾಲಿನ ಕೆಳಗೆ ಇದ್ದ ಕಲ್ಲೊಂದರ ಮೇಲೆ ಕಣ್ಣು ಬಿದ್ದಿದೆ.
4 ದಿನಗಳಲ್ಲಿ $2.7 ಶತಕೋಟಿ ವ್ಯವಹಾರ ಮಾಡಿದ ಇ-ಕಾಮರ್ಸ್ ಕಂಪನಿಗಳು
ಹೊಳೆಯುವ ಹಳದಿ ಬಣ್ಣದ ಕಲ್ಲನ್ನು ಹಾಗೇ ದಿಟ್ಟಿಸಿ ನೋಡಿದ ನೊರೀನ್‌ಗೆ ಮೊದಲಿಗೆ ಅದೇನೆಂದು ಅರಿವೇ ಇರಲಿಲ್ಲ. ಉದ್ಯಾನದ ಅಧಿಕಾರಿಗಳಿಗೆ ಕಲ್ಲನ್ನು ತೋರಿದ ನೋರಿನ್‌ಗೆ ಬಳಿಕ ಅದು ವಜ್ರವೆಂದು ತಿಳಿದಿದೆ. ಇದು ಉದ್ಯಾನದಲ್ಲಿ ಇದುವರೆಗೂ ಕಂಡು ಬಂದ ಅತಿ ದೊಡ್ಡ ವಜ್ರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಜಿ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗಾವಕಾಶ, ಸಿಹಿ ಸುದ್ದಿ ನೀಡಿದ ಸಚಿವ ಈಶ್ವರಪ್ಪ
ಈ ವಜ್ರದ ಮೌಲ್ಯವು 22-23 ಲಕ್ಷ ರೂ.ಗಳಷ್ಟಿದೆ. ಜೆಲ್ಲಿಬೀನ್ ಗಾತ್ರದಲ್ಲಿರುವ ಈ ವಜ್ರವು ಸೂಕ್ಷ್ಮದರ್ಶಕ ಹಿಡಿದು ನೋಡಿದ ಬಳಿಕ ಇನ್ನಷ್ಟು ಆಕರ್ಷಕವಾಗಿ ಕಾಣುತ್ತಿದ್ದು, ಅದರ ಮೌಲ್ಯ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.